ವಿಜಯಸಾಕ್ಷಿ ಸುದ್ದಿ, ಗದಗ: ನಿವೃತ್ತಿಯ ನಂತರ ಬಂದ ಹಣವನ್ನು ತಮ್ಮ ಅಜ್ಜನವರ ಹೆಸರಿನಲ್ಲಿ ದತ್ತಿ ನಿಧಿಯಾಗಿಟ್ಟು, ಅದನ್ನು ಸಮಾಜಮುಖಿ ಚಟುವಟಿಕೆಗಳಿಗಾಗಿ ಬಳಸುವ ನಿವೃತ್ತ ಶಿಕ್ಷಕ ಎಸ್.ಎ. ಜಮಾದಾರರ ಕಾರ್ಯ ಅಪರೂಪದ್ದು ಎಂದು ಹಿರಿಯ ರಾಜಕಾರಣಿ ಡಿ.ಆರ್. ಪಾಟೀಲ ಶ್ಲಾಘಿಸಿದರು.
ಅವರು ಇಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶಾಸ್ತ್ರಿ ಹನಮಂತಸಿಂಗ ಜಮಾದಾರರ 51ನೇ ಪುಣ್ಯಸ್ಮರಣೋತ್ಸವ, ಅವರ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ, ಪ್ರತಿಭಾವಂತ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ತೊಡಗುವ ಗುಣವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ರಜಪೂತ ಸಮಾಜದವರು ತಮಗೆ ಮತ್ತು ತಮ್ಮ ಸಹೋದರ, ಸಚಿವ ಎಚ್.ಕೆ. ಪಾಟೀಲರಿಗೆ ರಾಜಕೀಯ ಬೆಂಬಲ ನೀಡುತ್ತಿರುವುದು ಎಂದಿಗೂ ಮರೆಯಲಾಗದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ. ರವೀಂದ್ರಸಿAಗರು, ಅತಿಥಿಗಳಾಗಿದ್ದ ಕೊಪ್ಪಳದ ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ಶಾಲಾಕ್ಯ ವಿಭಾಗದ ಮುಖ್ಯಸ್ಥರಾದ ಡಾ. ವೀರಯ್ಯ ಹಿರೇಮಠ, ಗದಗ ಜಿಲ್ಲಾ ಶಾಲಾ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣ ಇಲಾಖೆಯ ಮುಖ್ಯಸ್ಥರಾದ ಆರ್.ಎಸ್. ಬುರಡಿ, ಮಹಾರಾಷ್ಟçದ ಸಿಬಿಐ ವಿಶೇಷ ವಕೀಲರಾದ ಪ್ರದೀಪಸಿಂಗ ದೊಡ್ಡಮನಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮೃದ್ಧಿ ಹನುಮಾನಸಿಂಗ ಜಮಾದಾರ ಪ್ರಾರ್ಥಿಸಿದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಹನಮಂತಸಿಂಗ ಜಮದಾರ ಸ್ವಾಗತಿಸಿ, ಪರಚಯಿಸಿದರು. ಬಿ. ರಾಜೇಂದ್ರಸಿAಗ ಹಾಗೂ ಮಹೇಂದ್ರಸಿಂಗ ಮಾಲಾರ್ಪಣೆ ಮಾಡಿದರು. ಜಯಶ್ರೀ ರಜಪೂತ, ಯಶೋಧಾ ಜಮಾದಾರ, ಶ್ರೀದೇವಿ ದೊಡ್ಡಮನಿ ಭಕ್ತಿಗೀತೆ ಹಾಡಿದರು. ಶ್ರೀನಿಧಿ ಚರಣಸಿಂಗ ಭರತನಾಟ್ಯ ಪ್ರದರ್ಶನ ನೀಡಿದರು. ರಶ್ಮಿ ಜಮಾದಾರ, ಶ್ರೇಯಾ ಜಮಾದಾರ, ರೂಪಾಲಿ ಜಮಾದಾರ ಕಾರ್ಯಕ್ರಮ ನಿರೂಪಿಸಿದರು. ಶೇಡುಸಿಂಗ ಮತ್ತು ವಜ್ರಾಬಾಯಿ ದಂಪತಿಗಳನ್ನು ಸನ್ಮಾನಿಸಲಾಯಿತು. ವೀರೇಂದ್ರಸಿಂಗ ರಜಪೂತ ವಂದಿಸಿದರು.
ಹಿರಿಯ ಸಾಹಿತಿ ಜೆ.ಕೆ. ಜಮಾದಾರ ಮಾತನಾಡಿ, ಶಾಸ್‌ರಿ ಹನಮಂತಸಿಂಗರು ರಜಪೂತ ಸಮಾಜದಲ್ಲಿ ಅತ್ಯಂತ ಪ್ರತಿಭಾಶಾಲಿಗಳು. ಶಕ್ತಿ ಆರಾಧಕರಾಗಿದ್ದ ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು. ರೇಖಾಶಾಸ್ತ್ರ, ಪಂಚಾಂಗವನ್ನು ಅಭ್ಯಾಸ ಮಾಡಿದವರಾಗಿದ್ದರು. ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ, ಅವರ ನೆನಪು ಮರುಕಳಿಸುವಂತೆ ಮಾಡಿರುವ ಅವರ ಮೊಮ್ಮಗನ ಕಾರ್ಯ ಶ್ಲಾಘನೀಯ. ಸಮಾಜಕ್ಕೆ ಏನಾದರೂ ಮಾಡಬೇಕು ಎಂಬುದಕ್ಕೆ ಶ್ರೀಮಂತರೇ ಆಗಿರಬೇಕು ಎಂದೇನಿಲ್ಲ. ಅದಕ್ಕೆ ಪ್ರಾಮಾಣಿಕ ಮನಸ್ಸು, ಇಚ್ಛೆ ಇದ್ದರೆ ಸಾಕು ಎಂದರು.