ವಿಜಯಸಾಕ್ಷಿ ಸುದ್ದಿ, ಗದಗ: ಪಿಎಸಿಎಸ್‌ನ 13 ಕೋಟಿ ರೈತ ಸದಸ್ಯರು ಸೇರಿದಂತೆ ಇದು ಪಿಎಸಿಎಸ್‌ನ ವ್ಯಾಪಾರ ಚಟುವಟಿಕೆಗಳನ್ನು ಹೆಚ್ಚಿಸುತ್ತಿದೆ, ಅವುಗಳನ್ನು ಸ್ವಾವಲಂಬಿ ಆರ್ಥಿಕ ಘಟಕಗಳಾಗಲು ಸಹಾಯ ಮಾಡುತ್ತದೆ. ಮೊದಲ ಹಂತದಲ್ಲಿ 63000 ಪಿಎಸಿಎಸ್‌ನ್ನು ಸಿಎಸ್ಸಿಗಳಾಗಿ ಕೆಲಸ ಮಾಡಲು ತರಬೇತಿ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ 30000 ಪಿಎಸಿಎಸ್‌ಗೆ ತರಬೇತಿ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಿ.ಪಿ. ಪಾಟೀಲ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ರಾಜ್ಯ ಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಾಪುಗೌಡ ಡಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾನ್ಯ ಸೇವಾ ಕೇಂದ್ರಗಳು ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ನಾಗರಿಕರಿಗೆ ಬಿ2ಸಿ ಸೇವೆಗಳನ್ನು, ಆರೋಗ್ಯ, ಹಣಕಾಸು, ಶಿಕ್ಷಣ ಮತ್ತು ಕೃಷಿ ಸೇವೆಗಳನ್ನು ತಲಿಪಿಸಲು ಪ್ರವೇಶ ಕೇಂದ್ರಗಳಾಗಿವೆ. ಇದು ದೇಶದ ಪ್ರಾದೇಶಿಕ, ಭೌಗೋಳಿಕ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪೂರೈಸುವ ಪ್ಯಾನ್ ಇಂಡಿಯಾ ನೆಟ್‌ವರ್ಕ್ ಆಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಡಿಜಿಟಲ್ ಅಂತರ್ಗತ ಸಮಾಜದ ಸರ್ಕಾರದ ಆದೇಶವನ್ನು ಸಕ್ರಿಯಗೋಳಿಸುತ್ತದೆ ಎಂದು ಹೇಳಿದರು.
ಬಸವರಾಜ ಅರಬಗೊಂಡ ಮಾತನಾಡುತ್ತ, ಆರ್.ಬಿ.ಐ/ನಬಾರ್ಡ್ ಜೀವನೋಪಾಯದ ಚಟುವಟಿಕೆಗಳನ್ನು ನಡೆಸುವ ಮೂಲಕ ಗ್ರಾಮಸ್ಥರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವುದು ಉದ್ದೇಶವಾಗಿದೆ. ಪಿಎಸಿಎಸ್ ಬುಡಕಟ್ಟು ಸದಸ್ಯರಿಗೆ ಕೃಷಿ ಮತ್ತು ಕೃಷಿಗಾಗಿ ಬಡ್ಡಿ ರಹಿತ ಸಾಲ ಅಥವಾ ಕೃಷಿ ಸಾಲಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಶಿವಕುಮಾರಗೌಡ ಎಸ್.ಪಾಟೀಲ ಮಾತನಾಡುತ್ತಾ, ಸಾಮಾನ್ಯ ಸೇವಾ ಕೇಂದ್ರಗಳನ್ನು ಪಿಎಸಿಎಸ್ ಮೂಲಕ ಗ್ರಾಮೀಣ ಜನರಿಗೆ ಲಭ್ಯವಾಗುವಂತೆ ಮಾಡುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಮಹಾಮಂಡಳದ ಸಹಕಾರ ಶಿಕ್ಷಣಾಧಿಕಾರಿ ಶರಣಬಸಪ್ಪ ಜಿ.ಕಾಟ್ರಳ್ಳಿ ಮಹಾಮಂಡಳದ ಕಾರ್ಯಚಟುವಟಿಕೆಗಳು ಹಾಗೂ ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿ ಸ್ವಾಗತಿಸಿದರು. ಎಚ್.ಜಿ. ಹಿರೇಗೌಡ್ರ, ಸಿ.ಎಂ. ಪಾಟೀಲ, ವಾಯ್.ಎಫ್. ಪಾಟೀಲ, ನಿಂಗನಗೌಡ ಎಂ.ಮರಿಗೌಡ್ರ, ಎಸ್.ಎಸ್. ಕಬಾಡೆ, ಅರವಿಂದ ಎನ್.ನಾಗಜ್ಜನವರ, ಎಂ.ಎಫ್. ಕಲಗುಡಿ, ಸಿ.ಕೆ. ಮಾಳಶೆಟ್ಟಿ, ಎಸ್.ಜಿ. ಆಲದಕಟ್ಟಿ ಉಪಸ್ಥಿತರಿದ್ದರು.
ಲೆಕ್ಕಪತ್ರಗಳ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆಗೆ ಪೂರ್ವ ಸಿದ್ದತೆ ಕುರಿತು ಜಿ.ಕೆ. ರಾಮಪ್ಪ, ಸಹಕಾರಿ ಕಾಯಿದೆ ಮುಖ್ಯಾಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳ ಕುರಿತು ಪ್ರಶಾಂತ ಮುಧೋಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣಕೀಕರಣ ಹಾಗೂ ಸಾಮಾನ್ಯ ಸೇವಾ ಕೇಂದ್ರದ (ಸಿಎಸ್‌ಸಿ) ಸೌಲಭ್ಯಗಳ ಕುರಿತು, ಅದೆಪ್ಪ ಉಪನ್ಯಾಸ ನೀಡಿದರು.
ಶಂಕ್ರಪ್ಪ ರಾ. ಸಂಕಣ್ಣವರ ಪ್ರಾರ್ಥಿಸಿದರು. ಶೇಖರ ಎಸ್.ಕರಿಯಪ್ಪನವರ ನಿರೂಪಿಸಿ, ವಂದಿಸಿದರು.
ಕೆ.ಸಿ.ಸಿ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿನಿತಾ ಸಿದ್ರಾಮ್ ಮಾತನಾಡುತ್ತಾ, ಈ ಉಪಕ್ರಮದ ಮೂಲಕ ಸಾಮಾನ್ಯ ನಾಗರಿಕರ ಜೀವನ ಸೌಕರ್ಯವನ್ನು ಸುಧಾರಿಸುತ್ತದೆ. ಸಹಕಾರ ವಲಯವು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲಿಯೂ ರೈತರು ಹಾಗೂ ಹೈನುಗಾರರ ಬದುಕಿನ ಆಸರೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.