ಬೆಂಗಳೂರು:7ನೇ ವೇತನ ಆಯೋಗದ ವೇತನ ಪರಿಷ್ಕರಣೆಯನ್ನು ಆಗಸ್ಟ್ 1 ರಿಂದಲೇ ಅನ್ವಯವಾಗುವಂತೆ ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಏಳನೇ ವೇತನ ಆಯೋಗ ರಚನೆ ಮಾಡಲಾಗಿತ್ತು. ಏಳನೇ ವೇತನ ಆಯೋಗ ವರದಿ ನೀಡಿ, ಶಿಫಾರಸು ಮಾಡಿದೆ. ಆ.1 ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
30% ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. 27.5% ವೇತನ ಹೆಚ್ಚಳ ಮಾಡಲಾಗುವುದು. ಮೂಲವೇತನ 17 ಸಾವಿರದಿಂದ 27 ಸಾವಿರ ವರೆಗೆ ಹೆಚ್ಚಳವಾಗಲಿದೆ. ಗರಿಷ್ಠ 1,50,600 ದಿಂದ 2,43,000 ವರೆಗೂ ವೇತನ ಹೆಚ್ಚಳವಾಗಲಿದೆ. ಪಿಂಚಣಿ ಕನಿಷ್ಠ 8 ಸಾವಿರದಿಂದ 13 ಸಾವಿರಕ್ಕೆ ಹೆಚ್ಚಾಗಲಿದೆ. ಗರಿಷ್ಠ ಪಿಂಚಣಿ 75,300 ರೂ. ನಿಂದ 1,20,600 ವರೆಗೂ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.