ಉತ್ತಮ ಫಲಿತಾಂಶದೊಂದಿಗೆ ಶಾಲೆಯ ಕೀರ್ತಿ ಹೆಚ್ಚಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹಿದಾಯತ್ ಪೂರ್ವ ಪ್ರಾರ್ಥಮಿಕ ಹಾಗೂ ಜೆ.ಯು. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಆಚರಿಸಲಾಯಿತು. ಮುಖ್ಯ ಅಥಿತಿಗಳಾದ ಅಜಾದ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಅಲ್ ಹಾಜ್ ಸರ್ಫರಾಜ್ ಅಹಮ್ಮದ್ ಉಮಚಗಿ ಉದ್ಘಾಟಿಸಿದರು.

Advertisement

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳು ಯಾವಾಗಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಷ್ಟೇ ಅಲ್ಲದೆ, ವಿದ್ಯಾಭ್ಯಾಸದಲ್ಲಿಯೂ ಮುಂದಿದ್ದು, ಉತ್ತಮ ಫಲಿತಾಂಶ ತಂದರೆ ಶಾಲೆಯ ಕೀರ್ತಿ ಹೆಚ್ಚುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಓದಬೇಕು ಎಂದು ಕಿವಿ ಮಾತನ್ನು ಹೇಳಿದರು.

ಶಿಕ್ಷಣ ಇಲಾಖೆಯ ನಿವೃತ್ತ ಡಿಡಿಪಿಅಯ್ ಐ.ಬಿ. ಬೆನಕೊಪ್ಪ, ಇಲಕಲ್‌ನ ಅರೇಬಿಕ್ ಶಾಲೆಯ ಶಿಕ್ಷಕ ಲಾಲಹುಸೇನ್ ಕಂದಗಲ್, ನಿವೃತ್ತ ಶಿಕ್ಷಕ ಎಂ.ಎಸ್. ಚಿನ್ನೂರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಹಾಜಿ ಜುನೇದ ಉಮಚಗಿ ವಹಿಸಿಕೊಂಡಿದ್ದರು. ಕೆ.ಅಯ್. ಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯ ಉದ್ದಿಮೆದಾರರಾದ ವಿಜಯಕುಮಾರ ಗಡ್ಡಿ, ಅಶ್ಪಾಕ್ ಹೊಸಳ್ಳಿ ಇಂಜಿನಿಯರ್, ಹಾಜಿ ಇಕ್ಬಾಲ್ ಹಣಗಿ, ಅಬ್ದುಲ್ ಹಫಿಜ್ ಉಮಚಗಿ, ಶಾಲೆಯ ಪ್ರಧಾನ ಗುರುಮಾತೆ ಪರವಿನ ಗುದಗಿ ಹಾಗೂ ಶಾಲೆಯ ಎಲ್ಲ ಗುರುಮಾತೆಯರು ಉಪಸ್ಥಿರಿದ್ದರು.

ಇದೇ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.


Spread the love

LEAVE A REPLY

Please enter your comment!
Please enter your name here