ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳು ಚಟುವಟಿಕೆಗಳ ಮೂಲಕ ಕಲಿಯುವುದರಿಂದ ಅವರ ಕಲಿಕೆ ಗಟ್ಟಿಗೊಳ್ಳುತ್ತದೆ ಎಂದು ಐಎಫ್‌ಎ ಸಂಸ್ಥೆಯ ಟಿ.ಎನ್. ಕೃಷ್ಣಮೂರ್ತಿ ಹೇಳಿದರು.
ಅವರು ಸಮೀಪದ ಹುಲಕೋಟಿ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಕೇಂದ್ರೀಯ ಶಾಲೆಯಲ್ಲಿ `ಕಲಿ ಕಲಿಸು’(ಮುದ್ರಣ ಕಾಶಿ ಗದಗ) ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಅನುಭವಾತ್ಮಕ ಕಲಿಕೆಯಿಂದ ಮಕ್ಕಳಲ್ಲಿ ಕಲಿಕಾಶಕ್ತಿ ಹೆಚ್ಚುತ್ತದೆ ಎಂದರು.
ಗದಗ ಗ್ರಾಮೀಣ ಬಿಇಓ ವಿ.ವಿ. ನಡುವಿನಮನಿ, ಎನ್.ಎಸ್. ಹಿರೇಗೌಡರ, ಗಂಗಾಧರ ಬಬಲಿ, ಎಸ್.ಕೆ. ಹೊಟ್ಟಿನ, ಯಲ್ಲಪ್ಪ ಹಂದ್ರಾಳ, ಸಿಆರ್‌ಪಿ ಬೂದೇಶ ಕಪ್ಲಿ, ವಿಜಯಲಕ್ಷ್ಮೀ ಹಿರೇಕೊಪ್ಪ, ಅನುಪಮಾ ಬಿಳೆಬಾಳ ಮುಂತಾದವರಿದ್ದರು.



