ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದ ರೈತ ಮಾರುತೆಪ್ಪ ಬೈಲಪ್ಪ ಕಡೇಮನಿ (58) ಸಾಲಬಾಧೆಗೆ ಮನನೊಂದು ಗುರುವಾರ ನೇಣಿಗೆ ಶರಣಾಗಿದ್ದಾರೆ. ಮೃತ ರೈತನು ಗ್ರಾಮದ ಕೆವಿಜಿ ಬ್ಯಾಂಕಿನಲ್ಲಿ 2.5 ಲಕ್ಷ ರೂ ಕೃಷಿಸಾಲ, ಸಂಘಗಳಲ್ಲಿ ಮತ್ತು ಕೈಸಾಲ ಸಾಲ ಪಡೆದುಕೊಂಡಿದ್ದಾರೆ.
Advertisement
ಇರುವ ಮೂರುವರೆ ಎಕರೆ ಜಮೀನಿನಲ್ಲಿ ಕಳೆದ ಕೆಲ ವರ್ಷಗಳಿಂದ ಉತ್ತಮ ಬೆಳೆಯೂ ಬಂದಿರಲಿಲ್ಲ ಮತ್ತು ಸಾಲದ ಬಡ್ಡಿಯೂ ಹೆಚ್ಚಾಗಿದ್ದರಿಂದ ಸಾಲ ತೀರಿಸುವುದು ಹೇಗೆಂಬ ಚಿಂತೆಯಿಂದ ಮನನೊಂದು ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.