HomeIndia Newsಹೆಣ್ಣುಮಕ್ಕಳ ಮೈ ಮುಟ್ಟಿ ಅಸಭ್ಯ ವರ್ತನೆ: ನಡು ರಸ್ತೆಯಲ್ಲಿ ಟ್ಯೂಷನ್ ಶಿಕ್ಷಕನ ಬೆತ್ತಲೆ ಮೆರವಣಿಗೆ!

ಹೆಣ್ಣುಮಕ್ಕಳ ಮೈ ಮುಟ್ಟಿ ಅಸಭ್ಯ ವರ್ತನೆ: ನಡು ರಸ್ತೆಯಲ್ಲಿ ಟ್ಯೂಷನ್ ಶಿಕ್ಷಕನ ಬೆತ್ತಲೆ ಮೆರವಣಿಗೆ!

For Dai;y Updates Join Our whatsapp Group

Spread the love

ಮುಂಬೈ:- ಹೆಣ್ಣುಮಕ್ಕಳ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಟ್ಯೂಷನ್ ಶಿಕ್ಷಕನ ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಜರುಗಿದೆ.

ಬಾಲಕಿಯರ ಪೋಷಕರು ಮತ್ತು ಸ್ಥಳೀಯರು ಸೇರಿ ಟ್ಯೂಷನ್ ಶಿಕ್ಷಕನನ್ನು ಥಳಿಸಿ, ಆತನ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ. ಇದಾದ ಬಳಿಕ ಆ ಶಿಕ್ಷಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ಇದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಬಹುತೇಕರು ಇಂತಹ ಕಾಮುಕರಿಗೆ ಕಾನೂನಿನಲ್ಲೇ ಶಿಕ್ಷೆಯಾಗಬೇಕೆಂದು ಕಾಯುತ್ತಾ ಕುಳಿತರೆ ಮನೆಯ ಹೆಣ್ಣುಮಕ್ಕಳು ವಾಪಾಸ್ ಸುರಕ್ಷಿತವಾಗಿ ಮನೆ ತಲುಪುತ್ತಾರೆ ಎಂಬ ನಂಬಿಕೆಯೇ ಇಲ್ಲವಾಗುತ್ತದೆ ಎಂದಿದ್ದಾರೆ.

13 ವರ್ಷದ ಬಾಲಕಿ ಆತನ ಟ್ಯೂಷನ್ ತರಗತಿಗೆ ಹೋಗಲು ನಿರಾಕರಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಆಕೆಯ ಪೋಷಕರು ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ, ಆಕೆ ಟ್ಯೂಷನ್ ಶಿಕ್ಷಕ ದಿನವೂ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ತಿಳಿಸಿದಳು. ಇದರಿಂದ ಎಚ್ಚೆತ್ತುಕೊಂಡ ಪೋಷಕರು ಆ ಟ್ಯೂಷನ್ ಕ್ಲಾಸ್​ನ ಬೇರೆ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಅವರಿಗೂ ಇದೇ ರೀತಿಯ ಅನುಭವವಾಗಿದ್ದು ಗೊತ್ತಾಯಿತು.

ಇನ್ನು ಸುಮ್ಮನಿದ್ದರೆ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲ ಎಂದು ತಿಳಿದ ಪೋಷಕರು ತಾವೇ ಆ ಶಿಕ್ಷಕನಿಗೆ ಬುದ್ಧಿ ಕಲಿಸಲು ನಿರ್ಧರಿಸಿದರು. ಆ ಬಾಲಕಿಯರ ಪೋಷಕರು ಮತ್ತು ಇತರ ನಾಗರಿಕರು ಶಿಕ್ಷಕರನ್ನು ಥಳಿಸಿದರು. ವಿರಾರ್‌ನಲ್ಲಿನ ಅವರ ತರಗತಿಗಳಿಂದ ಆ ಶಿಕ್ಷಕನನ್ನು ಹೊರಗೆ ಎಳೆದ ನಂತರ ಅವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!