ಬಳ್ಳಾರಿ:- ಶಾಪಿಂಗ್ ಗೆ ಬಂದಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಯುವಕನಿಗೆ ಹುಡುಗಿ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗಣಿಜಿಲ್ಲೆ ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿ ಜರುಗಿದೆ.
Advertisement
ಕುಟುಂಬದವರ ಜೊತೆ ಯುವತಿಯು, ಶಾಪಿಂಗ್ ಗೆ ಬಂದಿದ್ದರು. ಈ ವೇಳೆ ಯುವತಿ ಬಳಿ ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಬೇಸತ್ತ ಯುವತಿ, ತನ್ನ ಕುಟುಂಬದವರಿಗೆ ಮಾಹಿತಿ ನೀಡಿದ್ದಳು. ಕೂಡಲೇ ಯುವಕನನ್ನು ನಿಲ್ಲಿಸಿ ಯುವತಿ ಕುಟುಂಬಸ್ಥರು, ಧರ್ಮದೇಟು ಕೊಟ್ಟಿದ್ದಾರೆ. ನಗರದ ರಾಯಲ್ ವೃತ್ತದ ಬೆಂಗಳೂರ್ ರಸ್ತೆಯಲ್ಲಿ ಈ ಘಟನೆ ಜರುಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ