HomeGadag Newsಲಾಠಿ ಪ್ರಹಾರ ನಡೆಸಿದ ಪಿಎಸ್‌ಐ ಈರಣ್ಣ ರಿತ್ತಿ ಅಮಾನತ್ತಿಗೆ ಶ್ರೀರಾಮಸೇನೆ ಪಟ್ಟು: ಧರಣಿ ಸತ್ಯಾಗ್ರಹ

ಲಾಠಿ ಪ್ರಹಾರ ನಡೆಸಿದ ಪಿಎಸ್‌ಐ ಈರಣ್ಣ ರಿತ್ತಿ ಅಮಾನತ್ತಿಗೆ ಶ್ರೀರಾಮಸೇನೆ ಪಟ್ಟು: ಧರಣಿ ಸತ್ಯಾಗ್ರಹ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷೇಶ್ವರ ಪಿಎಸ್‌ಐ ಈರಣ್ಣ ರಿತ್ತಿ ಅಮಾನತ್ತಿಗೆ ಆಗ್ರಹಿಸಿ ಪಟ್ಟಣದ ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರು ಬುಧವಾರ ತಹಸೀಲ್ದಾರ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡರು.

ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವಾಸುದೇವ ಎಂಸ್ವಾಮಿ ಮತ್ತು ಸಿಪಿಐ ನಾಗರಾಜ ಮಾಡಳ್ಳಿ, ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಪಿಎಸ್‌ಐ ಈರಣ್ಣ ರಿತ್ತಿ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತಿದ್ದು, ಸದ್ಯಕ್ಕೆ ಧರಣಿ ಕೈಬಿಡುವಂತೆ ತಿಳಿಸಿದರು.

https://youtu.be/Wd3A_P8nVbI?si=Nupnpdb-4Sa1Q5r2

ಧರಣಿ ನಿರತ ಗೋಸಾವಿ ಸಮಾಜದ ಯುವಕ ಹರೀಶ ಗೋಸಾವಿ ಮತ್ತು ಶ್ರೀರಾಮಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ ಪ್ರತಿಕ್ರಿಯಿಸಿ, ನ್ಯಾಯ ಕೇಳಲು ಮುಂದಾದರೆ ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ತಮ್ಮ ಬೆಂಬಲಿಗರ ಮೂಲಕ ಹೆದರಿಸಿ-ಬೆದರಿಸುವ ಕಾರ್ಯ ಮಾಡುತ್ತಿದ್ದಾರೆ.

ಅಂದು 163 ಕಲಂ ಅಡಿ ಪ್ರತಿಬಂಧಕಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು. ಆದಾಗ್ಯೂ ಅವರ ಮೇಲೆ ಯಾವುದೇ ಕ್ರಮವಾಗಿಲ್ಲದ ಕಾರಣ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಬೇಕಾಗಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆಯೇ ಸಾವಿರಾರು ಶ್ರೀರಾಮಸೇನೆ ಕಾರ್ಯಕರ್ತರು, ಗೋಸಾವಿ ಸಮಾಜದವರು ಬೆಳಗಾವಿ ಸುವರ್ಣಸೌಧದಿಂದ ಐಜಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು. ಅವರ ಮೇಲೆ ಕ್ರಮವಾಗುವರೆಗೂ ಶಾಂತ ರೀತಿಯಿಂದಲೇ ಧರಣಿ ನಡಸುತ್ತೇವೆ ಎಂದು ಹೇಳಿದರು.

ಇದರಿಂದ ಅನಿವಾರ್ಯವಾಗಿ ಅಧಿಕಾರಿಗಳು ವಾಪಸ್ ಹೋಗಿದ್ದು, ಧರಣಿ ಮುಂದುವರೆದಿದೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಧರಣಿಯಲ್ಲಿ ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಮಲ್ಲಿಕಾಜುನ ಹಾಳದೋಟದ, ಗೋವಿಂದ ಗೋಸಾವಿ, ವಿಕ್ರಂ ಗೋಸಾವಿ, ರಾಜು ಗೋಸಾವಿ, ಹನಮಂತ ರಾಮಗೇರಿ, ಕಿಶನ್ ಗೋಸಾವಿ, ವೆಂಕಟೇಶ ಗೋಸಾವಿ, ಜ್ಯೋತಿ ಗೋಸಾವಿ, ಮಂಗಳಾ ಗೋಸಾವಿ, ಅಂಜಲಿ ತುಳಸಿ, ಪೂರ್ಣಿಮಾ ಗೋಸಾವಿ, ಆಶಾ ಗೋಸಾವಿ ಸೇರಿದಂತೆ ಅನೆಕರು ಪಾಲ್ಗೊಂಡಿದ್ದರು.
ಗಣೇಶೋತ್ಸವ ಆಚರಣೆ ವೇಳೆಯೂ ವಿನಾಕಾರಣ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ದ್ವೇಷ, ಹಗೆ ಸಾಧಿಸುವ ಮನೋಭಾವದ ಪಿಎಸ್‌ಐ ರಿತ್ತಿ ಅವರಿಂದ ಭಯದಲ್ಲಿ ಬದುಕುವಂತಾಗಿದೆ. ಅವರನ್ನು ಅಮಾನತ್ತು ಮಾಡಿ ಇಲ್ಲವೇ ಇಲ್ಲಿಂದ ವರ್ಗಾವಣೆಯಾದರೂ ಮಾಡಬೇಕೆಂದು ಅ.೧೯ರಂದು ಲಕ್ಷ್ಮೇಶ್ವರ ಬಂದ್ ಮಾಡಿ ಪೊಲೀಸ್ ಇಲಾಖೆಯ ಗಮನಕ್ಕೆ ತರಲಾಗಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!