ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ಸಹಕಾರಿ ಪತ್ತಿನ ಸೊಸೈಟಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಆರ್.ಹಾದಿಮನಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕರು ಹಾಗೂ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ್ ಪೋತದಾರ, ಕಾರ್ಯಪಾಲಕ ಅಭಿಯಂತರರು ಹಾಗೂ ಕಚೇರಿಯ ವ್ಯವಸ್ಥಾಪಕರು ಮತ್ತು ಕಂದಾಯ ವಿಭಾಗಿ ಅಧಿಕಾರಿಗಳು, ಪರಿಸರ ಅಭಿಯಂತರರು ಹಾಗೂ ಸ್ಯಾನಿಟರಿ ಇನ್ಸ್ಪೆಕ್ಟರ್, ನಾಮನಿರ್ದೇಶನ ಸದಸ್ಯರಾದ ದುರ್ಗೇಶ್ ವಿಭೂತಿ, ಹಿರಿಯರಾದ ವಿರುಪಾಕ್ಷಪ್ಪ ರಾಮಗಿರಿ, ಸಂಘದ ನಿರ್ದೇಶಕರಾದ ಹೇಮೇಶ್ ಯಟ್ಟಿ, ಕೆಂಚಪ್ಪ ಪೂಜಾರ್, ಜಯಪ್ಪ ದೊಡ್ಡಮನಿ, ಸಂಗಪ್ಪ ವಡ್ಡಿನ, ಸಣ್ಣಪ್ಪ ಬೋಳಮ್ಮನವರ್, ವಾಸು ಹಾದಿಮನಿ, ನಾಗೇಶ್ ಬಳ್ಳಾರಿ, ವಿಜಯಲಕ್ಷ್ಮಿ ರಾಮಗಿರಿ, ಬಸವ್ವ ಬೇವಿನಮರದ, ಸಂಘದ ಕಾರ್ಯದರ್ಶಿ ಮರಿಯಪ್ಪ ಕೊಟ್ನೆಕಲ್, ಶಾಲಾ ವಿದ್ಯಾರ್ಥಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.