ಗ್ರೇನ್ ಮಾರ್ಕೆಟ್ ವ್ಯಾಪಾರಸ್ಥರಿಂದ ಸ್ವಾತಂತ್ರ್ಯೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಗ್ರೇನ್ ಮಾರುಕಟ್ಟೆಯಲ್ಲಿ ಹಣ್ಣು, ಹೂವು ಎಲೆ ಹಾಗೂ ಇತರೆ ವ್ಯಾಪಾರಸ್ಥರ ಸಂಘದಿಂದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು.

Advertisement

ಗಣ್ಯ ವ್ಯಾಪಾರಸ್ಥರಾದ ಜವಾಹರ ಬಂದಾ ಧ್ವಜಾರೋಹಣ ನೆರವೇರಿಸಿ, ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವು ಇಂದು ಅನುಭವಿಸುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನದಿಂದ ಸಾಕಾರಗೊಂಡ ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಂಡು ದೇಶದ ಏಕತೆ, ಐಕ್ಯತೆಗೆ ನಾವು ಒಗ್ಗಟ್ಟಿನಿಂದ ಇರಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಬ್ದುಲ್‌ರೆಹಮಾನ ಹುಯಿಲಗೋಳ ಮಾತನಾಡಿ, ಸ್ವಾತಂತ್ರ್ಯ ಯೋಧರು ತ್ಯಾಗ, ಬಲಿದಾನದಿಂದ ದೊರಕಿಸಿದ ಸ್ವಾತಂತ್ರ್ಯವನ್ನು ನಾವಿಂದು ಕಾಪಾಡಿಕೊಳ್ಳುವ ಮೂಲಕ ದೇಶದ ಒಗ್ಗಟ್ಟಿಗೆ, ಶಾಂತಿ, ಭಾತೃತ್ವಕ್ಕೆ ಮುಂದಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಶರಣಪ್ಪ ಸಾಸನೂರ, ಉಪಾಧ್ಯಕ್ಷ ರಾಜೇಸಾಬ ಅಡರಕಟ್ಟಿ, ಕಾರ್ಯದರ್ಶಿ ಶರಣು ಶಿಗ್ಲಿ, ಸಹ ಕಾರ್ಯದರ್ಶಿ ಮೇಹರಅಲಿ ಢಾಲಾಯತ, ಸದಸ್ಯರುಗಳಾದ ಎ.ಎನ್. ಅನ್ಸಾರಿ, ಅನ್ವರ್ ಖಾಜಿ, ವಿಜಯಕುಮಾರ ಬಾಗಮಾರ, ಗಣಪತಿ ಪಟಗೆ, ವೆಂಕಟರಮನ್ ಗುತ್ತಲ, ಮಹ್ಮದ್‌ಅಲಿ ರೋಣ, ಅಶ್ರಫ್‌ಅಲಿ ನಸಬಿ, ಅಜ್ಜಣ್ಣ ಮುಧೋಳ, ಪಿ.ಎಸ್. ಅರಸಿದ್ದಿ, ಅಶೋಕ ಭಾಂಡಗೆ, ಪರವೇಜ್ ಬೇಲೇರಿ, ತಿಪ್ಪಣ್ಣ ನೋನಾರೆ, ಮಹ್ಮದ್‌ಅಲಿ ತಂಬಾಕದ, ಮಂಜು ಲಕ್ಕುಂಡಿ, ಯಲ್ಲವ್ವ ಉಳ್ಳಿಕಾಶಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here