ವಿಜಯಸಾಕ್ಷಿ ಸುದ್ದಿ, ಡಂಬಳ : ಹೋಬಳಿಯ 24 ಗ್ರಾಮಗಳ ಶಾಲೆ, ಕಾಲೇಜು, ಗ್ರಾಮ ಪಂಚಾಯಿತಿ, ಸರ್ಕಾರಿ ಕಂದಾಯ ಇಲಾಖೆ, ಸಣ್ಣ ನೀರಾವರಿ, ಹೆಸ್ಕಾಂ ಇಲಾಖೆಗಳ ಆವರಣದಲ್ಲಿ 78ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
ಡಂಬಳ ಗ್ರಾ.ಪಂ: ಸ್ವಾತಂತ್ರೋತ್ಸವ ಎಂಬುದು ನಮ್ಮ ಹೆಮ್ಮೆ. ಈ ಶುಭ ಸಂದರ್ಭದಲ್ಲಿ ಎಲ್ಲ ಸ್ವಾತಂತ್ರ‍್ಯ ಸೇನಾನಿಗಳ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ ಹೇಳಿದರು.
ಡಂಬಳ ಗ್ರಾ.ಪಂ ಆವರಣದಲ್ಲಿ ಧ್ವಜಾರೋಣ ನೆರವೇರಿ ಅವರು ಮಾತನಾಡಿದರು. ಅದೆಷ್ಟೋ ಮಹನೀಯರ ತ್ಯಾಗ-ಬಲಿದಾನ, ಹೋರಾಟದ ಫಲವಾಗಿ ಲಭಿಸಿದೆ. ನಾವೆಲ್ಲರೂ ದಾಸ್ಯದಿಂದ ಬಿಡುಗಡೆಯಾದ ದಿನ ಇದಾಗಿದೆ ಎಂದು ಹೇಳಿದರು. ಮಕ್ಕಳಿಗೆ ಶಾಲಾ ಕಲಿಕಾ ಸಾಮಗ್ರಿಗಳ ವಿತರಣೆಗೆ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಡಿಒ ಶಶಿದರ ಹೊಂಬಳ, ಉಪಾಧ್ಯಕ್ಷೆ ಲಕ್ಷ್ಮಿ ಕಾಶಭೋವಿ, ಗ್ರಾ.ಪಂ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರು, ಗುರುವೃಂದ, ವಿದ್ಯಾರ್ಥಿಗಳು, ಗ್ರಾ.ಪಂ ಸಿಬ್ಬಂದಿ ವರ್ಗ, ಕಾರ್ಯಕ್ರಮವನ್ನು ರಮೇಶ ಕೊರ್ಲಹಳ್ಳಿ ನಿರೂಪಿಸಿದರು.
ರೈತ ಸಂಪರ್ಕ ಕೇಂದ್ರ: ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಎಸ್.ಬಿ. ರಾಮೇನಳ್ಳಿ ಧ್ವಜಾರೋಹಣ ನೆರವೇರಿಸಿದರು. ಸಿಬ್ಬಂದಿಗಳಾದ ಎಸ್.ಎಸ್. ಮೂಡಲಗಿ, ನಿಂಗಪ್ಪ ಹೊಸಳ್ಳಿ, ಡಿ.ಡಿ. ಸೊರಟೂರ, ಗಿರಿಯಪ್ಪ, ನಾಗರಾಜ, ಮಾರುತಿ ರಾಠೋಡ, ರೈತರು ಇದ್ದರು.
ಪೊಲೀಸ್ ಠಾಣೆಯಲ್ಲಿ: ಇಲ್ಲಿನ ಪೊಲೀಸ್ ಹೊರಠಾಣೆಯ ಎಎಸ್‌ಐ ವೀರಣ್ಣ ತಂಟ್ರಿ ಧ್ವಜಾರೋಹಣ ನೆರವೇರಿಸಿದರು. ಬಸುರಾಜ ಬಣಕಾರ, ರಹಮಾನಸಾಬ ನಧಾಪ, ವಿದ್ಯಾರ್ಥಿಗಳು ಇದ್ದರು.
ಮಾಜಿ ಸೈನಿಕರು: ಡಂಬಳ ಗ್ರಾಮದ ಅಶೋಕ ಸ್ಥಂಬದ ಆವರಣದಲ್ಲಿ ಬುಧವಾರ ರಾತ್ರಿ 12 ಗಂಟೆಗೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಾಸಪ್ಪ ಕಾಶಭೋವಿ ಧ್ವಜಾರೋಹಣ ನೆರವೇರಿಸಿದರು. ಗ್ರಾಮದ ಮಾಜಿ ಸೈನಿಕರು ಸೇರಿದಂತೆ ಇತರರು ಇದ್ದರು.
ಉಪತಹಸೀಲ್ದಾರ ಕಚೇರಿಯಲ್ಲಿ
ಇಲ್ಲಿನ ಕಂದಾಯ ಇಲಾಖೆಯ ಉಪತಹಸೀಲ್ದಾರ ಕಚೇರಿಯ ಆವರಣದಲ್ಲಿ ಉಪತಹಸೀಲ್ದಾರ ಚಿದಾನಂದ ಬೂಳವಟಗಿ ಧ್ವಜಾರೋಹಣ ನೆರವೇರಿಸಿದರು. ಕಂದಾಯ ನಿರೀಕ್ಷಕ ಪ್ರಭು ಭಾಗಲಿ, ಎಮ್.ಎಮ್. ವಿಭೂತಿ, ಹನಮಂತಪ್ಪ ತಳವಾರ, ಸುರೇಶ, ಧರ್ಮಣ್ಣ ಮತ್ತು ಗ್ರಾಮದ ಮುರ್ತುಜಾ ಮನಿಯಾರ ಸೇರಿದಂತೆ ಇತರರು ಇದ್ದರು.