ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಗಂಗಿಮಡಿಯ ಆಶ್ರಯ ಕಾಲೋನಿಯಲ್ಲಿ ಎಂ.ಜಿ. ಚಾರಿಟೇಬಲ್ ಹಾಗೂ ಅಬುಹುರೇರಾ ಮಸ್ಜಿದ್ ಸಹಯೋಗದಲ್ಲಿ ಗುರುವಾರ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವು ಅಬುಹುರೇರಾ ಮಸ್ಜಿದ್ ಕಮಿಟಿಯ ಉಪಾಧ್ಯಕ್ಷ ಚಾಂದಸಾಬ ಅಬ್ಬಿಗೇರಿ ಹಾಗೂ ಮೌಲಾನಾ ಮಹಮ್ಮದ್ ಅಲಿಯವರು ನೆರವೇರಿಸಿದರು.
Advertisement
ಈ ಸಂದರ್ಭದಲ್ಲಿ ಅಬುಹುರೇರಾ ಮಸ್ಜಿದ್ ಕಮಿಟಿಯ ಕಾರ್ಯದರ್ಶಿ ಮಹಮ್ಮದ ಸಾಬ ಬೋದ್ಲೇಖಾನ್. ಎಂ.ಜಿ. ಚಾರಿಟೇಬಲ್ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಗಫುರ್ ಪಲ್ಲೆದ, ಹಿರಿಯರಾದ ಅಹಮ್ಮದ ಕಲೆಗಾರ, ಬಾಬಾಜಾನ್ ಕೊಡತಗೇರಿ, ಅಹಮ್ಮದ್, ಮೈನುದ್ದಿನ ಗುಜಮಾಗಡಿ, ಸಿಕಂದರ ಶಿರಹಟ್ಟಿ, ಮುಸ್ತಫಾ, ಹಾಫಿಜ್ ರೋಣ, ಸಯ್ಯದ್ ಇಟಗಿ, ಅಕ್ಬರ್ ಬೋದ್ಲೇಖಾನ, ನೂರ ಅಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.