ಬೆಂಗಳೂರು:- ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಾಲ್ ಬಾಗ್ನಲ್ಲಿ ಫ್ಲವರ್ ಶೋನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಆಯೋಜಿಸುತ್ತಿದ್ದು, ಆಗಸ್ಟ್ 8 ರಂದು ಸಿಎಂ ಸಿದ್ದಾರಾಮಾಯ್ಯ ಅವರು ಅದ್ದೂರಿಯಾಗಿ ಉದ್ಘಾಟನೆ ಮಾಡಲಿದ್ದಾರೆ. ಈ ಬಾರಿಯ ಫ್ಲವರ್ ಶೋ ವಿದೇಶಿ ಹಾಗೂ ಸ್ವದೇಶಿ ಹೂಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ದು, ಒಟ್ಟು 34 ಲಕ್ಷಗಳ ಹೂಗಳಿಂದ ಫ್ಲವರ್ ಶೋ ಕಂಗೊಳಿಸಲಿದೆ. ಇನ್ನು ಈ ಫ್ಲವರ್ ಶೋ ಆಗಸ್ಟ್ 19 ರವರೆಗೆ ಇರಲಿದೆ.
ಹೌದು, ಈ ಬಾರಿ ಸಂವಿಧಾನ ಶಿಲ್ಪಿ ಅಂಬೆಡ್ಕರ್ ಅವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಆಯೋಜಿಸಿದ್ದು, ಅಂಬೆಡ್ಕರ್ ಅವರ ಮೊಮ್ಮಗ ಯಶ್ವಂತ್ ಅಂಬೆಡ್ಕರ್ ಅವರು ಕೂಡ ಫ್ಲವರ್ ಶೋ ಆಗಮಿಸುತ್ತಿದ್ದಾರೆ. ಅಂದಹಾಗೇ ಫ್ಲವರ್ ಶೋನಲ್ಲಿ ಅಂಬೆಡ್ಕರ್ ಅವರ ಹಲವು ವಿಚಾರಗಳು, ಅವರು ಬೆಳೆದು ಬಂದ ಹಾದಿಯನ್ನು ಫ್ಲವರ್ ಶೋ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಇನ್ನು ಪ್ಲವರ್ ಶೋನಲ್ಲಿ ಸಂಸತ್ ಹಾಗೂ ಅಂಬೆಡ್ಕರ್ ಅವರ ಪ್ರತಿಮೆಗಳು ಪ್ರಮುಖ ಆಕರ್ಷಣೆಯಾಗಿದೆ.
ಫ್ಲವರ್ ಶೋನಲ್ಲಿ ಬಗೆ ಬಗೆಯ ಒಟ್ಟು 35 ಲಕ್ಷಹೂಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ಬಾರಿ 9 ರಿಂದ 10 ಲಕ್ಷ ಜನರು ಫ್ಲವರ್ ಶೋ ಬಂದಿದ್ರು. ಈ ವರ್ಷ ಇದಕ್ಕಿಂತ ಹೆಚ್ಚು ಜನರುಬರುವ ಸಾಧ್ಯಾತೆ ಇದ್ದು, ಫ್ಲವರ್ ಶೋಗೆ ಬರುವವರಿಗರ 4 ಗೇಟ್ ಗಳಲ್ಲಿ ಎಂಟ್ರಿ ಕೊಡಲಾಗಿದೆ. ಇನ್ನು ಭದ್ರತಾ ದೃಷ್ಟಿಯಿಂದ 200 ಜನ ವಾಲಿಂಟರಿಯರ್ಸ್ ಸ್ವಚ್ಚತೆಯಲ್ಲಿ ಇರಲಿದ್ದು, ಯಾವುದೇ ಅಚಾತುರ್ಯ ಘಟನೆಗಳು ಸಂಭಂವಿಸಿದಂತೆ 6 ಆ್ಯಂಬುಲೆನ್ಸ್ ಆಯೋಜಿಸಲಾಗಿದೆ ಮಾಡಲಾಗಿದ್ದು, 6 ಕಡೆ ಆರೋಗ್ಯ ಶಿಬಿರ ಹಾಕಲಾಗಿದೆ. ಇನ್ನು ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಸ್ವಚ್ಚತೆಗೆ ಹೆಚ್ಚಿನ ಆಧ್ಯಾತೆ ನೀಡಿದ್ದು, ಡೆಂಗ್ಯೂ ಹೆಚ್ಚಾಗದಂತೆ ನೀರು ಇರುವ ಕಡೆ ಸ್ವಚ್ಚ ಮಾಡಲಾಗಿದೆ.
ಇನ್ನು ಪ್ಲವರ್ ಶೋ ಗೆ ಬರುವವರಿಗೆ ಶಾಂತಿನಗರದ ಬಸ್ ನಿಲ್ದಾಣದದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಟ್ರಾಫಿಕ್ ಉಂಟಾಗದಂತೆ ಮೆಟ್ರೋವನ್ನೇ ಬಳಸುವಂತೆ ಸೂಚನೆ ನೀಡಲಾಗಿದೆ. ಪ್ಲವರ್ ಶೋನಲ್ಲಿ ದೊಡ್ಡವರಿಗೆ 80 ರೂ ಟಿಕೆಟ್ ಇದ್ದು, ರಜಾ ದಿನಗಳಲ್ಲಿ 100 ರೂಪಾಯಿ ನಿಗದಿಮಾಡಲಾಗಿದೆ. ಇನ್ನು ಶಾಲಾ ಮಕ್ಕಳಿಗೆ ಫ್ರೀ ನೀಡಲಾಗಿದೆ. ಈ ಫ್ಲವರ್ ಶೋಗೆ ಈ ಬಾರಿ ಎರಡು ಕೋಟಿ ಖರ್ಚು ಮಾಡಿದ್ದು, ಬೆಳ್ಳಗ್ಗೆ 9 ಗಂಟೆಯಿಂದ ರಾತ್ರಿ 6 ಗಂಟೆಯವರೆಗೂ ಪ್ಲವರ್ ಶೋ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.
ಫ್ಲವರ್ ಶೋಗೆಂದೆ ಸಧ್ಯ ಲಾಲ್ ಬಾಗ್ ಗಾರ್ಡಾನ್ ನಲ್ಲಿ 4 ಸಾವಿರಕ್ಕು ಹೆಚ್ಚು ವಿವಿಧ ಬಗೆ ಬಗೆ – ಬಗೆಯ ಹೂಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ದು, ಆಂಥೋರಿಯಂ ಹೂಗಳು, ಗುಲಾಬಿ, ಜರ್ಬೆರಾ, ಆರ್ಕಿಡ್, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್‌ಹಾಟ್ ಪೋಕರ್, ಆಲ್‌ಸ್ಟೋಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧ ರಾಜ, ಕುಂಡಗಳಲ್ಲಿ ಅರಳಿದ ದೇಶ-ವಿದೇಶಗಳ ಹತ್ತಾರು ಬಗೆಯ ಹೂಗಳು, ಬೋಗನ್‌ವಿಲ್ಲಾದ ಹೂ ಗಿಡಗಳು, ಲಿಲ್ಲಿ, ಜರ್ ಬೆರಾ ಹೂಗಳು ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳು ಲಾಲ್ ಬಾಗ್ ಗೆ ಆಗಮಿಸಿವೆ.