ಬೆಂಗಳೂರು:- ಭಾರತಕ್ಕೆ ಉಗ್ರಗಾಮಿಗಳಿಗಿಂತ ಕಾಂಗ್ರೆಸ್ಸಿಗರಿಂದಲೇ ಗಂಡಾಂತರ ಎಂದು ಬಿಜೆಪಿ ಮುಖಂಡ ಚಲವಾದಿ ನಾರಾಯಣಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ನಲ್ಲಿ ಉಗ್ರರು ಹಿಂದೂ ಮತ್ತು ಮುಸಲ್ಮಾನ ಪ್ರವಾಸಿಗರನ್ನು ಬೇರ್ಪಡಿಸಿ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡಿಕೊಂಡು ಗುಂಡಿಕ್ಕಿ ಕೊಂದಿದ್ದಾರೆ, ಆದರೆ ಕೆಲ ಕಾಂಗ್ರೆಸ್ ನಾಯಕರು ಈ ಅಂಶವನ್ನು ಅಲ್ಲಗಳೆಯುತ್ತಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರೇನಾದರೂ ಪಹಲ್ಗಾಮ್ ಘಟನೆಯನ್ನು ಕಣ್ಣಾರೆ ವೀಕ್ಷಿಸಿದ್ದಾರಾ? ತಮ್ಮ ತಂದೆ, ಚಿಕ್ಕಪ್ಪ, ಮಾವ ಮುಂತಾದವರ ಮೇಲೆ ಉಗ್ರರು ದಾಳಿ ನಡೆಸಿ ಕೊಂದಿದ್ದನ್ನು ಕಣ್ಣಾರೆ ನೋಡಿರುವ ಮಕ್ಕಳು ಹಿಂದೂಗಳನ್ನೇ ಟಾರ್ಗೆಟ್ ಮಾಡಿದ್ದರು ಅಂತ ಹೇಳುತ್ತಿದ್ದಾರೆ, ಕಾಂಗ್ರೆಸ್ ಬಹಳ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ, ಅದರ ನಾಯಕರ ಮಾತುಗಳನ್ನು ಕೇಳುತ್ತಿದ್ದರೆ ಭಾರತಕ್ಕೆ ಉಗ್ರಗಾಮಿಗಳಿಗಿಂತ ಅವರಿಂದಲೇ ಹೆಚ್ಚು ಗಂಡಾಂತರವಿದೆ ಅನಿಸುತ್ತದೆ ಎಂದು ಚಲವಾದಿ ಹೇಳಿದರು.