ಬೆಂಗಳೂರು:- ಭಾರತ ಹಸಿವಿನಿಂದ ನರುಳುತ್ತಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೊದಲು ಇದರ ಬಗ್ಗೆ ಮಾತಾಡಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಯತ್ನಾಳ್, ಸಿಟಿ ರವಿ, ಅಶೋಕ್ ರೀತಿ ಮಾತನಾಡುವುದು ಬಿಟ್ಟು ದೇಶದ ಸಮಸ್ಯೆ ಬಗ್ಗೆ ಮಾತಾಡಲಿ.
ಭಾರತ ಹಸಿವಿನ ಗ್ರಾಫ್‌ನಲ್ಲಿ ಎಷ್ಟನೇ ಸ್ಥಾನದಲ್ಲಿ ಇದೆ ಅಂತ ಮೊದಲು ನೋಡಿ. ಭಾರತ ಹಸಿವಿನಿಂದ ನರುಳುತ್ತಿದೆ ಇದರ ಬಗ್ಗೆ ಮಾತನಾಡಿ. ನಿರುದ್ಯೋಗ ಜಾಸ್ತಿ ಆಗುತ್ತಿದೆ, ಆಂತರಿಕ ಭದ್ರತೆ, ನಾವು ಪಾಕಿಸ್ತಾನವನ್ನು ಹೇಗೆ ಸದೆಬಡಿಬೇಕು ಎನ್ನುವುದರ ಬಗ್ಗೆ ಮಾತನಾಡಿ. ಬಡತನ ಬಗ್ಗೆ ಹಸಿವಿನ ಬಗ್ಗೆ ಮಾತಾಡಿ ಅಂದರೆ ನೀವೂ ಯತ್ನಾಳ್, ಸಿಟಿ ರವಿ ಕ್ಯಾಟಗಿರಿಗೆ ಸೇರಿಕೊಂಡಿದ್ದೀರಿ ಅಂತ ಕಿಡಿಕಾರಿದರು.
ಮೋಹನ್ ಭಾಗವತ್ ಅಂದರೆ ಪೂಜ್ಯನಿಯ ಭಾವನೆ ಇತ್ತು. ಬೆಂಗಳೂರಿಗೆ ಬಂದು ಹಿಂದೂರಾಷ್ಟ್ರ ಬಗ್ಗೆ ಮಾತಾಡ್ತೀರಾ. ನೀವು ಅಬ್ದುಲ್ ಕಲಾಂ ಟ್ರೂ ನ್ಯಾಷನಲ್ ಲೀಡರ್ ಅಂತ ಕರೆದಿದ್ದೀರಿ. ಆದರೆ ಅವರು ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದು. ದೇಶ ಭಕ್ತರು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಧರ್ಮದಲ್ಲೂ ಇದ್ದಾರೆ ಎಂದರು.


