ನವದೆಹಲಿ: ಸಾಹಸೀ ಮನೋಭಾವದ ಮುಕ್ತ ಉದ್ಯಮಗಳ ಅವಶ್ಯಕತೆ ಭಾರತಕ್ಕೆ ಇದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯವಾಗಿ ವಿವಿಧ ದೇಶಗಳ ನಡುವೆ ಆಳವಾದ ಮೈತ್ರಿ ಏರ್ಪಡುವ ಸಮಯ ಇದು.
ಬಲಾಢ್ಯ ದೇಶಗಳ ಒತ್ತಡ ಪ್ರತಿರೋಧಿಸಲು ಇದು ಬೇಕು. ದೇಶಗಳ ನಡುವೆ ದ್ವಾರ ಮುಕ್ತಗೊಂಡಾಗ ಜನರಿಗೆ ಉಪಯೋಗವಾಗುತ್ತದೆ. ನಮಗೆ ಗೋಡೆಗಳು ಬೇಕಿಲ್ಲ, ಹೆಚ್ಚು ಕಿಟಕಿಗಳು ಬೇಕು ಎಂದರು.
ಇನ್ನೂ ಮನುಷ್ಯರಲ್ಲಿ ಪರಿವರ್ತನೆ ತರದ ಶಿಕ್ಷಣ ನಿರರ್ಥಕ. ಜನಸಂಖ್ಯೆಯ ಬಲವನ್ನು ಸರಿಯಾಗಿ ಉಪಯೋಗಿಸಬೇಕೆಂದರೆ ಮಕ್ಕಳನ್ನು ಸಣ್ಣ ವಯಸ್ಸಿನಿಂದಲೇ ನಾವೀನ್ಯತೆಗೆ ಉತ್ತೇಜಿಸುವಂತಹ ಶಿಕ್ಷಣ ಬೇಕು ಎಂದಿದ್ದಾರೆ ಜನರು ದೊಡ್ಡ ಕನಸು ಕಂಡಾಗ,
ದೇಶವನ್ನು ಕಟ್ಟಲು ಹೋದಾಗ ಸಂಚಲನ ಸೃಷ್ಟಿಯಾಗುವುದು ಸಹಜ. ಹೊಸ ನಿಯಮಗಳನ್ನು ಮಾಡಬೇಕಾಗುತ್ತದೆ. ಹಳೆಯ ನಿಯಮಗಳನ್ನು ತೆಗೆಯಬೇಕಾಗಬಹುದು. ಜನರ ನಾವೀನ್ಯತೆಯನ್ನು ಆಡಳಿತಶಾಹಿ ವ್ಯವಸ್ಥೆ ಕೊಲ್ಲದಂತೆ ನೋಡಿಕೊಳ್ಳಬೇಕು ಎಂದು ಸದ್ಗುರು ತಿಳಿಸಿದ್ದಾರೆ.