ನವದೆಹಲಿ: ಭಾರತ ಮತ್ತು ಬ್ರಿಟನ್ ದೇಶಗಳ ಮಧ್ಯೆ ಇಂದು ಐತಿಹಾಸಿಕವೆನಿಸುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಒಪ್ಪಂದದಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟು ವಾರ್ಷಿಕವಾಗಿ 34 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೇ ನೀಡಿದ್ದಾರೆ.
ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತ-ಇಂಗ್ಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಭಾರತದ ಆರ್ಥಿಕ ರಾಜತಾಂತ್ರಿಕತೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದರು. ಸುಂಕ ರಹಿತ ವ್ಯಾಪಾರ ಪ್ರವೇಶದೊಂದಿಗೆ ಸಾಂಪ್ರದಾಯಿಕ ಭಾರತೀಯ ರಫ್ತುಗಳು, ವಿಶೇಷವಾಗಿ ಕರ್ನಾಟಕದ ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳು ಜಾಗತಿಕ ಮಟ್ಟದ ಬೇಡಿಕೆಯಲ್ಲಿ ಮಹತ್ವಪೂರ್ಣ ಉತ್ತೇಜನ ಕಾಣುತ್ತಿವೆ.
ಇದು ನಮ್ಮ ಕುಶಲಕರ್ಮಿಗಳಿಗೆ ಹೆಮ್ಮೆಯ ಕ್ಷಣ ಎಂದು ನಾನು ಭಾವಿಸಿದ್ದೇನೆ. ಚನ್ನಪಟ್ಟಣವು ಈಗ ಇಂಗ್ಲೆಂಡ್ ಮಾರುಕಟ್ಟೆಗೆ ನೇರ ಪ್ರವೇಶವನ್ನು ಹೊಂದಿದಂತೆ ಆಗಿದೆ ಹಾಗೂ ಇದು ನಮ್ಮ ಪಾರಂಪರಿಕ ಕಲಾವೈಭವಕ್ಕೆ ಆರ್ಥಿಕ ಸಬಲೀಕರಣದ ಸಂರಕ್ಷಣೆಯನ್ನು ಖಚಿತಪಡಿಸಿದೆ ಎಂದು ಹೇಳಿದ್ದಾರೆ.
ಇನ್ನೂ ಕುಶಲಕರ್ಮಿಗಳ ಜೀವನೋಪಾಯವನ್ನು ಬಲಪಡಿಸಲು ಮತ್ತು ಭಾರತದ ಜಾಗತಿಕ ವ್ಯಾಪಾರದ ಹೆಜ್ಜೆಗುರುತನ್ನು ವಿಸ್ತರಿಸಲು ಈ ದೂರದೃಷ್ಟಿಯ ಹೆಜ್ಜೆಗಾಗಿ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ.