ನವದೆಹಲಿ: ಏಷ್ಯಾಕಪ್ನ ಬಿಗ್ಗೆಸ್ಟ್ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ. ಬದ್ಧವೈರಿಗಳ ನಡುವಿನ ವಾರ್ ನೋಡಲು ಇಡೀ ವಿಶ್ವ ಕ್ರಿಕೆಟ್ ಲೋಕವೇ ಸನ್ನದ್ಧವಾಗಿದೆ. ಇನ್ನೂ ವಿಚಾರವಾಗಿ AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಭಾರತಕ್ಕೆ ಪಾಕಿಸ್ತಾನದೊಂದಿಗೆ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಆಡಲು ಅವಕಾಶ ನೀಡಿದೆ.
26 ಜನರ ಜೀವಗಳಿಗಿಂತ ಆರ್ಥಿಕ ಲಾಭವೇ ಮುಖ್ಯವೇ? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಉಗ್ರರು ಪಹಲ್ಗಾಮ್‌ನಲ್ಲಿ ನಮ್ಮ 26 ನಾಗರಿಕರರನ್ನು ಗುಂಡು ಹಾರಿಸಿ ಕೊಂದಿದ್ದರು. ಇದಕ್ಕಾಗಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯ ಆಡಲು ನಿರಾಕರಿಸುವ ಅಧಿಕಾರ ನಿಮಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 26 ನಾಗರಿಕರ ಜೀವಕ್ಕಿಂತ ಈ ಪಂದ್ಯದ ಮೂಲಕ ಗಳಿಸುವ ಹಣ ಹೆಚ್ಚು ಮೌಲ್ಯಯುತವೇ? ಬಿಸಿಸಿಐ ಒಂದು ಕ್ರಿಕೆಟ್ ಪಂದ್ಯದಿಂದ ಎಷ್ಟು ಹಣ ಪಡೆಯುತ್ತದೆ? 2000 – 3000 ಕೋಟಿ ರೂ.? ನಮ್ಮ 26 ನಾಗರಿಕರ ಜೀವಕ್ಕಿಂತ ಇದು ಮುಖ್ಯವೇ? ನಾವು ಆ 26 ನಾಗರಿಕರ ಪರ ಅಂದು ನಿಂತಿದ್ದೆವು, ಇಂದು ನಾವು ಅವರೊಂದಿಗೆ ನಿಲ್ಲುತ್ತೇವೆ. ನಾಳೆಯೂ ಅವರೊಂದಿಗೆ ನಿಲ್ಲುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.