ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ವಿಶಿಷ್ಟ ಸಾಧನೆ ಮಾಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 134 ಎಸೆತಗಳನ್ನು ಎದುರಿಸಿ ಕೇವಲ 19 ರನ್ ಗಳಿಸಿದರು.
ಇದರ ಪರಿಣಾಮ, ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 100ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿ ಅತೀ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಭಾರತೀಯ ಆಟಗಾರ ಎಂಬ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಮೊದಲು ಈ ದಾಖಲೆ ಭಾರತೀಯ ಟೆಸ್ಟ್ ಕ್ರಿಕೆಟಿನ ದಂತಕಥೆ ರಾಹುಲ್ ದ್ರಾವಿಡ್ ಹೆಸರಲ್ಲಿ ಇತ್ತು. 2004ರಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದ್ರಾವಿಡ್ 140 ಎಸೆತಗಳನ್ನು ಎದುರಿಸಿ 21 ರನ್ ಗಳಿಸಿದ್ದರು.
ಕುಲ್ದೀಪ್ ಈ ಪಂದ್ಯದಲ್ಲಿ ಎದುರಿಸಿದ 134 ಎಸೆತಗಳಲ್ಲಿ 14.17 ಸ್ಟ್ರೈಕ್ ರೇಟ್ ನಷ್ಟೇ ಕಾಯ್ದುಕೊಂಡು ರಾಹುಲ್ ದ್ರಾವಿಡ್ ಅವರ 20 ವರ್ಷ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಕಠಿಣ ಬೌಲಿಂಗ್ ಎದುರಿಸಿದರೂ ದೀರ್ಘ ಕಾಲ ಕ್ರೀಸ್‌ನಲ್ಲಿ ನಿಂತು ತಂಡಕ್ಕೆ ಅಗತ್ಯದ ಕೊಡುಗೆ ನೀಡುವಲ್ಲಿ ಅವರು ಯಶಸ್ವಿಗಳಾದರು.



