ಚಿಕ್ಕಮಗಳೂರು:- ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಬೇರು ಸಮೇತ ಕಿತ್ತು ಹಾಕದಿದ್ರೆ ಭಾರತಕ್ಕೆ ಉಳಿಗಾಲವಿಲ್ಲ ಎಂದು ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ.
ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕ್ರಿಕೆಟ್ ಗ್ರೌಂಡ್‌ಗೆ ಬಂದು ಪಾಕಿಸ್ತಾನ ಜಿಂದಾಬಾದ್ ಎಂದವನ ಹೊಡೆದಿದ್ದಕ್ಕೆ ಪ್ರತಿಕಾರವಾಗಿ ಭಾರತ್ ಮಾತಾ ಕೀ ಜೈ ಎನ್ನುವವನನ್ನು ಹತ್ಯೆ ಮಾಡಲಾಗಿದೆ.ದೇಶದ ಹೊರಗಿನ ಶತ್ರುಗಳನ್ನು ಸೇನೆ ನೋಡಿಕೊಳ್ಳುತ್ತೆ, ಆದರೆ ಒಳಗಿನ ಶತ್ರುಗಳನ್ನ ರಾಜಕಾರಣದಿಂದ ದೂರವಿಟ್ಟು ಬೇರು ಸಹಿತ ಕಿತ್ತುಹಾಕಬೇಕು ಎಂದರು.
ಎಸ್‌ಡಿಪಿಐ ಮತಾಂಧತೆಯ ಹುಚ್ಚು ಹಿಡಿದ ದ್ರೋಹಿಗಳನ್ನು ಸಂಘಟಿಸೋ ಕೆಲಸ ಮಾಡುತ್ತಿದೆ. ಇವರೆಲ್ಲಾ ಮತಾಂಧತೆಯ ಹುಚ್ಚು ಹಿಡಿಸಿಕೊಂಡಿರುವ ದೇಶದ್ರೋಹಿಗಳು. ಇವರನ್ನ ಸಹಿಸೋದಾಗಲಿ, ಕ್ಷಮಿಸೋದಾಗಲಿ ಎರಡನ್ನೂ ಮಾಡಬಾರದು. ವಿಧಾನಸೌಧದ ಕಾರಿಡಾರ್‌ಗೆ ಬಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಾರೆ. ಇವರನ್ನು ನಿಯಂತ್ರಿಸದಿದ್ದರೆ, ಬೇರು ಸಹಿತ ಕಿತ್ತು ಹಾಕದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದ್ದಾರೆ.