ರಾಯಚೂರು: ವಾಜಪೇಯಿ, ಮೋದಿ ಪ್ರಧಾನಿ ಆಗದಿದ್ದರೆ ಭಾರತ ಪಾಕಿಸ್ತಾನ ಆಗ್ತಾ ಇತ್ತು ಎಂದು ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ವಾಜಪೇಯಿ, ಮೋದಿ ಪ್ರಧಾನಿ ಆಗದಿದ್ದರೆ ಭಾರತ ಪಾಕಿಸ್ತಾನ ಆಗ್ತಾ ಇತ್ತು.
Advertisement
ಹಿಂದೂ ರಾಷ್ಟ್ರ ಉಳಿಸಲು ಶ್ರೀರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ವಕ್ಫ್ ರದ್ದತಿಗೆ ಮೋದಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅದಕ್ಕೆ ಹಿಂದೂಗಳು ಬೆಂಬಲ ಕೊಡಬೇಕು. ಎಲ್ಲ ಮಠಾಧೀಶರು ಹೋರಾಟಕ್ಕೆ ಇಳಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಮುಕ್ತ ಮಾಡಲು ನಾವು ಹೋರಾಟ ಮಾಡಬೇಕು, ಹಿಂದೂಗಳು ಉಳಿಯಲು ಎಲ್ಲರೂ ಒಂದಾಗಬೇಕು. ಮೂರು ಚುನಾವಣೆ ಮೇಲೆ ದುಷ್ಪರಿಣಾಮ ತಪ್ಪಿಸಲು ನೋಟಿಸ್ ಹಿಂಪಡೆಯಲು ಸಿದ್ದರಾಮಯ್ಯ ಹೇಳಿದ್ದಾರೆ. ಕಾಲಂ ನಂಬರ್ 11 ತೆಗೆಯಲು ಹೇಳಿಲ್ಲ. ವಕ್ಫ್ ಹಠಾವೋ ಅಲ್ಲ, ಕಾಂಗ್ರೆಸ್ ಹಠಾವೋ ಎನ್ನಬೇಕಿದೆ ಎಂದು ಹೇಳಿದರು.