ನವದೆಹಲಿ:- ಭಾರತೀಯ ವಾಯು ಸೇನೆಯು, ಪಾಕ್ನ ಪ್ರಮುಖ ಎಫ್-16 ಹೊಡೆದುರುಳಿಸಿ ತಕ್ಕ ಶಾಸ್ತಿ ಮಾಡಿದೆ. ಭಾರತದ ಮೇಲೆ ತೊಡೆತಟ್ಟಿ ಬಂದ ಪಾಕಿಸ್ತಾನಕ್ಕೆ ಅಲ್ಲಲ್ಲೇ ಪ್ರತ್ಯುತ್ತರ ನೀಡುವ ಕೆಲಸ ಮುಂದುವರಿದಿದೆ. ಪಾಕಿಸ್ತಾನ ಬಿಟ್ಟ ಡ್ರೋನ್, ಫೈಟರ್ ಜೆಟ್ಗಳನ್ನು ಹೊಡೆದುರುಳಿಸಿದ ಭಾರತವು ಇದೀಗ ಪಠಾಣ್ಕೋಟ್ ಸೆಕ್ಟರ್ನಲ್ಲಿ ಪಾಕಿಸ್ತಾನಿ ವಾಯುಪಡೆಯ ಜೆಟ್ ಅನ್ನು ಭಾರತೀಯ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್ನಲ್ಲಿ ಭಾರತೀಯ ಸೇನೆಯ ವಾಯು ರಕ್ಷಣಾ ಘಟಕಗಳು ಎರಡು ಪಾಕಿಸ್ತಾನಿ ಡ್ರೋನ್ಗಳನ್ನು ಹೊಡೆದುರುಳಿಸಿದವು. ಸೆಕ್ಟರ್ನಲ್ಲಿ ಎರಡೂ ಕಡೆಯ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿರುವುದಾಗಿ ಸೇನೆ ತಿಳಿಸಿದೆ. ಪಾಕಿಸ್ತಾನ ಗುರುವಾರ ಜಮ್ಮುವನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದೆ. ಇದಕ್ಕೆ ಭಾರತೀಯ ವಾಯು ರಕ್ಷಣಾ ಪಡೆ ತಕ್ಕ ಉತ್ತರ ನೀಡುತ್ತಿದೆ. ಪಾಕಿಸ್ತಾನದ ವಾಯುಪಡೆಯ ಪ್ರಮುಖ ವಾಯುಪಡೆಯ ಕೇಂದ್ರವಾದ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯಿಂದ ಎಫ್ -16 ಹಾರಾಟ ನಡೆಸಿತು. ಈ ವೇಳೆ ಭಾರತೀಯ SAM ಸರ್ಗೋಧಾ ವಾಯುನೆಲೆಯ ಬಳಿ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿತು. ಸರ್ಗೋಧಾ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮುಂಚೂಣಿಯ ವಾಯುನೆಲೆಯಾಗಿದ್ದು, ದೇಶದಲ್ಲಿ ಅತ್ಯಂತ ಹೆಚ್ಚು ರಕ್ಷಣೆ ಹೊಂದಿರುವ ವಾಯುನೆಲೆಗಳಲ್ಲಿ ಒಂದಾಗಿದೆ.