ಭಾರತೀಯ ಸೇನೆಯ ಮಾಹಿತಿ ಲೀಕ್: ಭಾರತದಲ್ಲಿ ಪಾಕ್ ಪರ ಕೆಲಸ ಮಾಡುತ್ತಿದ್ದ ಇಬ್ಬರು ಅರೆಸ್ಟ್!

0
Spread the love

ನವದೆಹಲಿ:- ಪಾಕ್‌ ಗುಪ್ತಚರ ಸಂಸ್ಥೆಪರ ಕೆಲಸ ಮಾಡುತ್ತಿದ್ದ ಇಬ್ಬರನ್ನು ಪಂಜಾಬ್ ನ ಅಮೃತಸರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

ಎಸ್, ಪಹಲ್ಗಾಮ್‌ನಲ್ಲಿ ಉಗ್ರರು ನರಮೇಧ ಮಾಡಿದ ಬಳಿಕವೂ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಕೆಲಸ ಮಾಡುತ್ತಿದ ಇಬ್ಬರನ್ನು ಇದೀಗ ಬಂಧಿಸಲಾಗಿದೆ. ಆರೋಪಿಗಳು ಅಮೃತಸರದಲ್ಲಿರುವ ಸೇನಾ ಅಂಟಾನ್ಮೆಂಟ್ ಪ್ರದೇಶ, ವಾಯುನೆಲೆಗಳ ಸೂಕ್ಷ್ಮ ಮಿಲಿಟರಿ ಮಾಹಿತಿ ಮತ್ತು ಫೋಟೋಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಕಳುಹಿಸಿದ್ದರು.

ಶನಿವಾರ ಶೇರ್ ಮಾಸಿಹ್ ಮತ್ತು ಸೂರಜ್ ಮಾಸಿಹ್ ಬಂಧನ ಮಾಡಲಾಗಿದ್ದು ಸದ್ಯ ಇವರನ್ನು ಅಮೃತಸರ ಕೇಂದ್ರ ಜೈಲಿಗೆ ಕಳುಹಿಸಲಾಗಿದೆ. ಪಂಜಾಬ್ ಡಿಜಿಪಿ ಗೌರವ್ ಯಾದವ್ ಪ್ರತಿಕ್ರಿಯಿಸಿ, ಪ್ರಾಥಮಿಕ ತನಿಖೆಯ ವೇಳೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಜೊತೆ ಇವರು ಸಂಪರ್ಕ ಹೊಂದಿದ್ದರು. ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.


Spread the love

LEAVE A REPLY

Please enter your comment!
Please enter your name here