ಮುಂಬೈ: ಭಾರತದ ಬ್ಯಾಂಕ್ʼಗಳು ಜಗತ್ತಿನ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಬ್ಯಾಂಕಿಂಗ್ ಕುರಿತಾದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,
Advertisement
ಪ್ರಧಾನಿ ನರೇಂದ್ರ ಮೋದಿ 2047ರ ವೇಳೆಗೆ ಭಾರತವನ್ನು ‘ವಿಶ್ವಗುರು’ವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ. “ಸಂವಿಧಾನವು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸೇರ್ಪಡೆ ಎಂಬ ಮೂರು ರೀತಿಯ ಒಳಗೊಳ್ಳುವಿಕೆಯ ಬಗ್ಗೆ ಮಾತನಾಡುತ್ತದೆ. ಇವು ಭಾರತದ ಬೆಳವಣಿಗೆಯ ಕಥೆಗೆ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.
ದೇಶದ ಆರ್ಥಿಕ ಬೆಳವಣಿಗೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSME) ಬೆಂಬಲಿಸುವುದು ನಿರ್ಣಾಯಕವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್‌ನಂತಹ ದೈತ್ಯರು ಒಂದು ಹಂತದಲ್ಲಿ MSMEಗಳಾಗಿದ್ದವು ಎಂಬುದನ್ನು ಮರೆಯಬಾರದು ಎಂದು ಹೇಳಿದರು.