HomeGadag Newsಭಾರತದ ಸಂಸ್ಕೃತಿ ವಿಶ್ವಕ್ಕೇ ಮಾದರಿ

ಭಾರತದ ಸಂಸ್ಕೃತಿ ವಿಶ್ವಕ್ಕೇ ಮಾದರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಭಾರತದ ಪುಣ್ಯ ಭೂಮಿಯಲ್ಲಿ ಅದೆಷ್ಟೋ ಸಾಧು ಸಂತರು, ಪುಣ್ಯ ಪುರುಷರು, ಮಠಾಧೀಶರು ಬದುಕಿ ಈ ಭೂಮಿಯನ್ನು ಪಾವನಗೊಳಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಹೇಳಿದರು.

ಅವರು ಪಟ್ಟಣದ ಗ್ರಾಮ ದೇವತಾ ಟೋಪ ಜಾತ್ರಾ ಮಹೋತ್ಸವದ ಧರ್ಮಸಭೆ-1ರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಭಾರತ ದೇಶದ ಸಂಸ್ಕೃತಿ ಶ್ರೀಮಂತವಾದದ್ದು. ಇಂತಹ ಭೂಮಿಯಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಇಂತಹ ಜಾತ್ರೆಗಳನ್ನು ಆಚರಿಸಲಾಗುತ್ತಿದೆ. ಮಹಿಳೆ ಶಕ್ತಿಯ ದ್ಯೋತಕ, ಸಮೃದ್ಧಿಯ ಸಂಕೇತ. ಹಾಗಾಗಿ ಮಹಿಳೆಯನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ನಮ್ಮ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಸರಕಾರ ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು, ಮಹಾತ್ಮರು ಹಾಕಿ ಕೊಟ್ಟ ಮಾರ್ಗದಲ್ಲಿ ಆಡಳಿತ ನಡೆಸುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಇಲ್ಲಿ ಜಾತಿ, ಮತ, ಪಂಥಗಳಿಲ್ಲದೇ ಎಲ್ಲರೂ ಸೌಹಾರ್ದತೆಯಿಂದ, ಸಹಬಾಳ್ವೆಯಿಂದ ಎಲ್ಲಾ ಹಬ್ಬ ಹರಿದಿನಗಳನ್ನು ಆಚರಣೆ ಮಾಡುವುದು ವಿಶೇಷವಾಗಿದೆ. ಶಕ್ತಿ ದೇವತೆಯ ಜಾತ್ರಾ ಮಹೋತ್ಸವ ಆಚರಣೆಯಿಂದ ದುಷ್ಟ ಶಕ್ತಿಗಳು ನಿಗ್ರವಾಗಿ ನಾಡಿಗೆ ಒಳಿತಾಗುವುದು ಎಂದರು

ಅAತಾರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಗಾಯಕ ಪಂ. ಡಾ. ಎಂ.ವೆಂಕಟೇಶಕುಮಾರ ಅವರಿಂದ ಸಂಗೀತ ಸೇವೆ ಜರುಗಿತು. 3 ದಿನಗಳ ಕಾಲ ಅನ್ನ ಪ್ರಸಾದ ಸೇವೆ ಮಾಡುತ್ತಿರುವ ಶಿವಣ್ಣಾ ನೀಲಗುಂದ, ರಾಮಣ್ಣಾ ಕಮಾಜಿ, ಷಣ್ಮುಖಪ್ಪ ಬಡ್ನಿ ಕುಟುಂಬದವರಿಗೆ ಹಾಗೂ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ನಾಡಿನ ಹೆಸರಾಂತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದ ಸಾನ್ನಿಧ್ಯವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಬಳಗಾನೂರ ಚಿಕ್ಕೇನಕೊಪ್ಪದ ಶಿವಶಾಂತ ವೀರ ಶರಣರು ವಹಿಸಿದ್ದರು. ಅಧ್ಯಕ್ಷತೆಯನ್ನು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ವಹಿಸಿಕೊಂಡಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಪ.ಪಂ ಉಪಾಧ್ಯಕ್ಷರಾದ ಅನಸೂಯಾ ಸೋಮಗೇರಿ, ಗ್ರಾ.ದೇ. ಟ್ರಸ್ಟ್ ಉಪಾಧ್ಯಕ್ಷ ಅಶೋಕ ಸೋನಗೋಜಿ, ವಿ.ಎಸ್. ಮಾಳಿ, ರಾಮಣ್ಣಾ ಕಮಾಜಿ, ನಾಗರಾಜ ದೇಶಪಾಂಡೆ, ಬಸವರಾಜ ಹಾರೋಗೇರಿ, ಪರಶುರಾಮ ವಂಟಕರ, ಮನ್ಸೂರ ಹಣಗಿ, ತಾಜುದ್ದಿನ ಕಿಂಡ್ರಿ, ಪರಸಣ್ಣಾ ಸಂಗನಪೇಟಿ, ನಿಂಗಪ್ಪ ಕೊಲ್ಲಾರಿ ಹಾಗೂ ಮಂಜುನಾಥ ಮಟ್ಟಿ ಇದ್ದರು.

ಈ ಭಾಗದ ಸಚಿವರಾಗಿರುವ ಎಚ್.ಕೆ. ಪಾಟೀಲ ಅತ್ಯಂತ ಬುದ್ಧಿವಂತ, ಪ್ರಜ್ಞಾವಂತ ಸಚಿವರು. ಈ ಭಾಗದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೇ ಸವದತ್ತಿ ಯಲ್ಲಮ್ಮ ದೇವಿ ಪ್ರಾಧಿಕಾರ ರಚನೆ ಮಾಡುವ ಮೂಲಕ 110 ಕೋಟಿ ಅನುದಾನ ನೀಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!