ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಖ್ಯಾತ ವೈದ್ಯರಾದ ಡಾ. ಜಿ.ಬಿ. ಬಿಡಿನಹಾಳ ಅವರನ್ನು ದೇಶದ ಪ್ರತಿಷ್ಠಿತ ಭಾರತೀಯ ವೈದ್ಯಕೀಯ ಸಂಘ, ದೆಹೆಲಿಯ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅಹಮದಾಬಾದ್‌ನ ಸಂಘದ ಮುಖ್ಯ ಚುನಾವಣಾ ಆಯುಕ್ತರಾದ ಡಾ.ಮಹೇಶ ಪಾಟೀಲ್ ತಿಳಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಬಿಡಿನಹಾಳ ಅವರ ಅನುಪಮ ಸೇವೆಯನ್ನು ಮನಗಂಡು ಅವರಿಗೆ ಈ ಸ್ಥಾನ ನೀಡಲಾಗಿದ್ದು, ವೈದ್ಯಕೀಯ ಮಾತ್ರವಲ್ಲದೇ ಕೃಷಿ, ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ನಮ್ಮ ಜಿಲ್ಲೆಗೆ ಮಾದರಿ ವ್ಯಕ್ತಿಯಾಗಿ ಕೀರ್ತಿ ತಂದಿದ್ದಾರೆ. ಡಾ. ಜಿ.ಬಿ ಬಿಡಿನಹಾಳ ಅವರು ಈಗಾಗಲೇ ಐ.ಎಂ.ಎ ಅಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಶಾಖೆಯ ಕ್ರೀಡಾ ಅಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಕ್ರೀಡಾ ಸ್ಥಾಯಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಹೈದರಾಬಾದ್‌ನಲ್ಲಿ ಜರುಗುವ ವಾರ್ಷಿಕ ವೈದ್ಯಕೀಯ ಸಮ್ಮೇಳನದಲ್ಲಿ ಅಧಿಕಾರ ಸ್ವೀಕಾರ ನಡೆಯಲಿದೆ. ಗದಗ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ವೈದ್ಯಕೀಯ ಸಂಘಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಜಿ.ಬಿ ಬಿಡಿನಹಾಳ ಅವರ ಸಾಧನೆ ಸಾರ್ಥಕವಾಗಿದೆ.
ಡಾ. ಬಿಡಿನಹಾಳ ಅವರನ್ನು ಕರ್ನಾಟಕ ರಾಜ್ಯ ಐ.ಎಂ.ಎ ಅಧ್ಯಕ್ಷರಾದ ಡಾ. ಎಸ್.ಶ್ರೀನಿವಾಸ, ಕಾರ್ಯದರ್ಶಿ ಬಿ.ಪಿ. ಕರುಣಾಕರ, ಗದಗ ಐ.ಎಂ.ಎ ಅಧ್ಯಕ್ಷರಾದ ಡಾ. ಪಲ್ಲೇದ ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಕಲಾಚೇತನ ಆಕಾಡಮಿಯ ಡಾ. ಕಾವೆಂಶ್ರೀ ಅಭಿನಂದಿಸಿದ್ದಾರೆ.