ವಿಜಯಸಾಕ್ಷಿ ಸುದ್ದಿ, ಗದಗ : ನಾಯಕತ್ವ ಎಂಬುದು ಸಹಜವಾಗಿ ಬರುವಂತದ್ದಲ್ಲ. ಅದು ಕಠಿಣ ಪರಿಶ್ರಮದ ಪ್ರತಿಫಲವಾಗಿದೆ. ನಾಯಕರಾದವರು ತ್ಯಾಗಕ್ಕೂ, ಸೇವೆಗೂ ಸದಾ ಸಿದ್ಧರಿರಬೇಕು ಎಂದು 38 ಕರ್ನಾಟಕ ಎನ್‌ಸಿಸಿ ಬಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಭುವನ್ ಖರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಎಲ್‌ಇ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಪ್ರತಿನಿಧಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸದರಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಶಾಲಾ ಪ್ರಧಾನಿಯಾಗಿ ಸಾಯಿಭುವನ್ ಬಳ್ಳಾರಿ, ಉಪ ಪ್ರಧಾನಿಯಾಗಿ ನಂದೀಶ ಎಸ್.ಕಣಗಿನಹಾಳ, ಬಾಲಕರ ಕಿರಿಯ ವಿಭಾಗದ ನಾಯಕನಾಗಿ ನಮನ ಎಸ್.ಪಟ್ಟದಕಲ್, ಬಾಲಕಿಯರ ಕಿರಿಯ ವಿಭಾಗದ ನಾಯಕಿಯಾಗಿ ಪ್ರಗತಿ ಆರ್.ಗಡಾದ, ಸಾಂಸ್ಕತಿಕ ಮಂತ್ರಿಯಾಗಿ ಪ್ರಾಚೀ ಎಂ.ಚಚಡಿ, ಸಾಂಸ್ಕೃತಿಕ ಉಪ ಮಂತ್ರಿಯಾಗಿ ಸುಕೃತಿ ಡಿ.ಪಾಟೀಲ, ಕ್ರೀಡಾ ಮಂತ್ರಿಯಾಗಿ ಚಿನ್ಮಯ ಎಂ.ಕರೇಗೌಡರ, ಕ್ರೀಡಾ ಉಪಮಂತ್ರಿಯಾಗಿ ಶೌರ್ಯ ಆರ್.ದೇಸಾಯಿ, ಶಿಸ್ತು ಮಂತ್ರಿಯಾಗಿ ವಿಶಾಲ ವಿ.ಕಾಟವೆ, ಶಿಸ್ತು ಉಪ ಮಂತ್ರಿಯಾಗಿ ಖುಷಿ ಎನ್.ಬಾಗಲಕೋಟೆ, ಕೆಂಪು ಪಡೆ ನಾಯಕನಾಗಿ ಪಾರ್ಥರೆಡ್ಡಿ ಎ.ಯಾದವಾಡ, ಉಪ ನಾಯಕಿಯಾಗಿ ಋತು ಬಿ.ಮುಧೋಳ, ಹಸಿರು ಪಡೆ ನಾಯಕಿಯಾಗಿ ಪೂರ್ವಿ ಎಸ್.ಮುಳಗುಂದಮಠ, ಉಪ ನಾಯಕಿಯಾಗಿ ಸೃಜನಾ ಎಸ್.ಹಿರೇಮಠ, ಹಳದಿ ಪಡೆ ನಾಯಕನಾಗಿ ಪ್ರೀತಮ್ ಎಂ.ಚಂದಪ್ಪನವರ, ಉಪ ನಾಯಕಿಯಾಗಿ ಸೌಜನ್ಯ ಎಸ್.ಪಾಟೀಲ, ನೀಲಿ ಪಡೆ ನಾಯಕಿಯಾಗಿ ಪ್ರಾಪ್ತಿ ಜಿ.ಮುಧೋಳ, ಉಪ ನಾಯಕಿಯಾಗಿ ಸಮೀಕ್ಷಾ ಲಿಂಗದಾಳಮಠ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಸರ್ವ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬ್ಯಾಡ್ಜ್ ಹಾಕಿ ಅಧಿಕಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ಆಯ್ಕೆಯಾದ ಪ್ರತಿನಿಧಿಗಳಿಗೆ ಶಾಲೆಯ ಪ್ರಾಂಶುಪಾಲರಾದ ಕಲ್ಪನಾ ಚಚಡಿ ಪ್ರಮಾಣ ವಚನ ಬೋಧಿಸಿದರು.
ಹಿರಿಯ ಶಿಕ್ಷಕ ವಿರೇಂದ್ರ ಗಂಗಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಾಲಾ ಸಂಸತ್ತಿನ ಸರ್ವ ಸದಸ್ಯರಿಗೆ ಸಂಸ್ಥೆಯ ಚೇರಮನ್ನರು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪ್ರೋತ್ಸಾಹಿಸಿದ್ದಾರೆ.