ಬೆಂಗಳೂರು;- ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಅಮಾನವೀಯ ಘಟನೆಯೊಂದು ಜರುಗಿದೆ. ನಾಯಿಯ ಮೇಲೆ ಯುವಕನೋರ್ವ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಕ್ಕದ ಮನೆಯ ಮನೋಜ್ ಕುಮಾರ್ ಎಂಬಾತನಿಂದ ಈ ಕೃತ್ಯ ಎಸಗಲಾಗಿದೆ. ಮನೆಯೊಂದರ ಶೆಡ್‌ನಲ್ಲಿ ಕಟ್ಟಿ ಹಾಕಿದ್ದ ನಾಯಿಯ ಮೇಲೆ ಮನೋಜ್ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡು ನಿತ್ರಾಣವಾಗಿದ್ದ ನಾಯಿ 2-3 ದಿನಗಳಲ್ಲಿ ಸಾವನ್ನಪ್ಪಿದೆ. ಸಿಸಿಟಿವಿ ಪರಿಶೀಲನೆ ವೇಳೆ ಯುವಕ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
ಘಟನೆಯ ಬಗ್ಗೆ ವಿಚಾರಿಸಿದಾಗ ನಾಯಿ ಕೋಳಿ ಹಿಡಿದ ವಿಚಾರ ಬಯಲಾಗಿದೆ. ತನ್ನ ಕೋಳಿಯನ್ನು ನಾಯಿ ಹಿಡಿದಿದೆ ಎಂದು ಯುವಕ ಹೇಳಿದ್ದಾನೆ. ಅದೇ ವಿಚಾರಕ್ಕೆ ನಾಯಿಯ ತಲೆಗೆ ಹೊಡೆದು ಯುವಕ ಗಾಯಗೊಳಿಸಿದ್ದ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



