ಅಮಾನವೀಯ ಕೃತ್ಯ: ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿ ಮೇಲೆ ಹಲ್ಲೆ ನಡೆಸಿದ ಸಬ್ ಇನ್ಸ್ ಪೆಕ್ಟರ್!

0
Spread the love

ಬೆಂಗಳೂರು: ಎಂಥೆಂಥವರೂ ಇರ್ತಾರೆ ನೋಡಿ. ಹೆಸರಿಗೆ ನ್ಯಾಯ ಕೊಡಿಸೋ ಪೊಲೀಸಪ್ಪ. ಆದರೆ ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ಆರೋಪ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಕೇಳಿ ಬಂದಿದೆ. ಈ ಘಟನೆ ಸಂಬಂಧ ಸಬ್ ಇನ್ಸ್ ಪೆಕ್ಟರ್ ಕಿಶೋರ್ ವಿರುದ್ಧ ಚಂದ್ರಲೇಔಟ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ.

Advertisement

ಪತ್ನಿ ವರ್ಷ ನೀಡಿದ ದೂರಿನ ಮೇಲೆ ಇನ್ಸ್ ಪೆಕ್ಟರ್ ಕಿಶೋರ್ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. 2024ರಲ್ಲಿ ಮೂಡಿಗೆರೆ ಸಬ್ ಇನ್ಸ್ ಪೆಕ್ಟರ್ ʼರನ್ನು ವರ್ಷ ಮದುವೆಯಾಗಿದ್ದರು. ವರದಕ್ಷಿಣೆಗಾಗಿ 10 ಲಕ್ಷ ನಗದು,22 ಲಕ್ಷದ ಕ್ರೇಟಾ ಕಾರು,135 ಗ್ರಾಂ ಚಿನ್ನ ನೀಡಿದ್ರು. ಅಲ್ಲದೆ ವರ್ಷಾಳಿಗೆ ಪೋಷಕರು 900 ಗ್ರಾಂ ಚಿನ್ನ ನೀಡಿದ್ದರು. ಜೊತೆಗೆ ಒಂದು ಕೋಟಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು.

ಇಷ್ಟಾದ್ರು ಮೂಡಿಗೆರೆಯಿಂದ ಟ್ರಾನ್ಸ್ ಫರ್ ಮಾಡಿಸೋಕೆ ಕಿಶೋರ್ 10 ಲಕ್ಷ ಕೇಳಿದ್ದರು. ಹಣ ತರದಿದ್ದಕ್ಕೆ ಹೆಂಡ್ತಿ ವರ್ಷಾಳಿಗೆ ಅವಾಚ್ಯವಾಗಿ ನಿಂದಿಸಿ  ಗಂಡ,ಅತ್ತೆ ಮಾವ ಹಾಗೂ ಮೈದುನನಿಂದ ಹಲ್ಲೆ ಮಾಡಲಾಗಿದೆ. ಅದಲ್ಲದೆ ಮನಸೋ ಇಚ್ಚೆ ಹಲ್ಲೆ ನಡೆಸಿ ಕಿಶೋರ್ ವರ್ಷಳನ್ನು ಧರ್ಮಸ್ಥಳದ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಡೌರಿ ಕೇಸ್ ಹಾಗು  ಬಿ ಎನ್ ಎಸ್ ಎಸ್ ಅಡಿ ಕಿಶೋರ್ ವಿರುದ್ಧ  ಚಂದ್ರಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here