ವಿಜಯಸಾಕ್ಷಿ ಸುದ್ದಿ, ಗದಗ: ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಗಳ ಕುಸಿತ ಮತ್ತು ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳ ಕೊರತೆಯಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ವಯಸ್ಸಿನ ಮುಸ್ಸಂಜೆಯಲ್ಲಿರುವ ವೃದ್ಧರ ಜೀವನಕ್ಕೆ ಶಿವರತ್ನ ವೃದ್ಧಾಶ್ರಮ ದಾರಿದೀಪವಾಗಿದೆ. ಇಂತಹ ಸಮಾಜಮುಖಿ ಕೆಲಸಕ್ಕೆ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಜೀವನ ಜ್ಯೋತಿ ಶಿವರತ್ನ ವೃದ್ಧಾಶ್ರಮ ಬೆಟಗೇರಿ ಸಂಸ್ಥೆಗೆ ಅವಶ್ಯವಿರುವ ಸಾಮಾಗ್ರಿಗಳನ್ನು ಪೂರೈಕೆ ಮಾಡಿದರು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷರಾದ ಅಶ್ವಿನಿ ಜಗತಾಪ್ ಮಾತನಾಡಿ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಜಯಿಸಬೇಕು. ಅದಕ್ಕೆ ಸಹಕಾರ ನೀಡುತ್ತಿರುವ ಜೀವನ ಜ್ಯೋತಿ ಶಿವರತ್ನ ವೃದ್ಧಾಶ್ರಮದ ಅಧ್ಯಕ್ಷರಾದ ಶಿವಣ್ಣಾ ಜಿ.ಮುಳುಗುಂದ, ಅವರ ಧರ್ಮಪತ್ನಿ ನಾಗರತ್ನಾ ಮುಳುಗುಂದ, ಮೇಲ್ವಿಚಾರಕರಾದ ಮಂಜುಳಾ ಲಕ್ಕುಂಡಿ ಅವರ ಈ ನಿಸ್ವಾರ್ಥ ಸೇವೆ, ವೃದ್ಧರ ಬಗ್ಗೆ ಅವರು ತೋರುವ ಕಾಳಜಿ ಶ್ಲಾಘನೀಯ ಎಂದರು.
ಕ್ಲಬ್‌ನ ಕಾರ್ಯದರ್ಶಿ ಶಿವಲೀಲಾ ಅಕ್ಕಿ ಮಾತನಾಡಿ, ಸಂಬಂಧಗಳ ವ್ಯಾಮೋಹವನ್ನು ಬಿಟ್ಟು ನಿಮ್ಮ ವಯಸ್ಕರೊಂದಿಗೆ ನಗುತ್ತಾ ಮುಂದಿನ ಜೀವನವನ್ನು ನೆಮ್ಮದಿಯಿಂದ ಸಾಗಿಸಬೇಕು ಎಂದರು.
ಇನ್ನರ್ ವ್ಹೀಲ್ ಕ್ಲಬ್‌ನ ಸದಸ್ಯರಾದ ಸುವರ್ಣಾ ಮದ್ರಿಮಠ, ಶಿವರತ್ನ ವೃದ್ಧಾಶ್ರಮದ ಅಧ್ಯಕ್ಷ ಶಿವಣ್ಣ ಮುಳುಗುಂದ ಮಾತನಾಡಿದರು. ಇನ್ನರ್ ವ್ಹೀಲ್ ಕ್ಲಬ್‌ನ ವತಿಯಿಂದ ವೆಟ್ ಮಿಕ್ಸರ್ ಗ್ರೈಂಡರ್ ಕೊಡುಗೆ ನೀಡಿರುವ ಸುವರ್ಣಾ ಮದ್ರಿಮಠ ಹಾಗೂ ಊಟದ ತಟ್ಟೆಗಳನ್ನು ನೀಡಿದ ಸಾಗರಿಕಾ ಅಕ್ಕಿಯವರಿಗೆ ಧನ್ಯವಾದಗಳನ್ನು ಕೋರಿದರು.
ಮೇಲ್ವಿಚಾರಕರಾದ ಮಂಜುಳಾ ಲಕ್ಕುಂಡಿ ಕಾರ್ಯಕ್ರಮ ನಿರ್ವಹಿಸಿದರು. ಇನ್ನರ್ ವ್ಹೀಲ್ ಕ್ಲಬ್‌ನ ಸಹ ಕಾರ್ಯದರ್ಶಿ ಜಯಶ್ರೀ ಉಗಲಾಟ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್‌ನ ಸದಸ್ಯರಾದ ಸುಶೀಲಾ ಕೋಟಿ, ಜ್ಯೋತಿ ದಾನಪ್ಪಗೌಡರ, ಸಾಗರಿಕಾ ಅಕ್ಕಿ ಪವಿತ್ರಾ ಬಿರಾದರ, ಶಿಲ್ಪಾ ಅಕ್ಕಿ ಹಾಗೂ ವೀಣಾ ಕಾವೇರಿ ಉಪಸ್ಥಿತರಿದ್ದರು.