ಅಮಾಯಕರೇ ಇವರ ಟಾರ್ಗೆಟ್: ಬಳ್ಳಾರಿಯಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್ ಬೆಳಕಿಗೆ!

0
Spread the love

ಬಳ್ಳಾರಿ:- ನಗರದ ಬ್ರೂಸ್ ಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್ ಬೆಳಕಿಗೆ ಬಂದಿದೆ. ಅಮಾಯಕ ಜನರಿಂದ ಕೋಟ್ಯಂತರ ರೂ ಲೂಟಿ ಮಾಡಿ ವಿಶ್ವನಾಥ್ ಎಂಬ ವ್ಯಕ್ತಿ ಪರಾರಿ ಆಗಿದ್ದಾನೆ. ವಾಸವಿ ಸ್ವಗೃಹ ಹೋಮ್ ನೀಡ್ಸ್ ಆ್ಯಂಡ್​ ಕನ್ಸಲ್ಟನ್ಸ್​ ಹೆಸರಲ್ಲಿ ಆರೋಪಿ ವಿಶ್ವನಾಥ್​, ಕಡಿಮೆ ಹಣ ಕೊಟ್ಟವರಿಗೆ ಕಡಿಮೆ ಬಡ್ಡಿ ಮತ್ತು ಹೆಚ್ಚು ಹಣ ಕೊಟ್ಟವರಿಗೆ ಹೆಚ್ಚು ಬಡ್ಡಿ ಎಂದು ನಂಬಿಸಿ ಮೋಸ ಮಾಡಿದ್ದಾನೆ. ಅಂದಾಜು 50 ಕೋಟಿಗೂ‌ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಆರೋಪ‌ ಕೇಳಿಬಂದಿದೆ. ಇದೀಗ ಮೋಸಕ್ಕೆ ಒಳಗಾದವರು ಠಾಣೆ ಮೆಟ್ಟಿಲೇರಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಬಳಿ ಒತ್ತಾಯ ಮಾಡಿದ್ದಾರೆ.

Advertisement

ಮೂರು ವರ್ಷದ ಹಿಂದೆ ವಿಶ್ವನಾಥ ಕಿರಾಣಿ ಅಂಗಡಿ ಹಾಕಿದ್ದರು. ಐದು ಸಾವಿರ ರೂ ಕಿರಾಣಿ ಪಡೆದರೆ ಎರಡು ಸಾವಿರ ರೂ ಮೌಲ್ಯದ ಅಡುಗೆ ಎಣ್ಣೆ ಕೊಡುವುದಾಗಿ ಮೊದಲು ಆಮಿಷ ಒಡ್ಡಿದ್ದರಂತೆ. ಹದಿನೈದು ಸಾವಿರ ರೂ ಕೊಟ್ಟರೆ ತಿಂಗಳ ನಂತರ 20 ಸಾವಿರ ರೂ ಕೊಡುವುದಾಗಿ ಮತ್ತು ಲಕ್ಷ ಲಕ್ಷ ಹಣ ಕೊಟ್ಟವರಿಗೆ 40% ಬಡ್ಡಿ ಕೊಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ. ಬಳಿಕ ಎರಡು ತಿಂಗಳ ಕಿರಾಣಿ ತೆಗೆದುಕೊಂಡರೆ ಒಂದು ತಿಂಗಳ ಕಿರಾಣಿ ಉಚಿತ ಕೊಟ್ಟಿದ್ದನಂತೆ. ಹೀಗೆ ಮಾಡುತ್ತ ನಿಧಾನಕ್ಕೆ ಜನರ ವಿಶ್ವಾಸ ಗಳಿಸಿದ ವಿಶ್ವನಾಥ್​, ಹಲವು ಸ್ಕೀಂಗಳನ್ನ ನೀಡಿ ಮೊದಲಿಗೆ ಆಮಿಷವೊಡ್ಡಿ ಜನರಿಂದ ಹಣ ವಸೂಲಿ ಮಾಡಿದ್ದಾರೆ. ಕಿರಾಣಿ ಅಂಗಡಿ ಮಾಲೀಕಕನ್ನು ನಂಬಿದ ಜನರು ಒಬ್ಬೊಬ್ಬರು ಮೂರು ಲಕ್ಷ, ಐದು ಲಕ್ಷ ಹೀಗೆ ಹತ್ತು ಲಕ್ಷದವರೆಗೆ ಹಣ ಹೂಡಿಕೆ ಮಾಡಿದ್ದಾರೆ. ಸುಮಾರು 50 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಸದ್ಯ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಮನೆಗೆ ಬೀಗ ಹಾಕಿ ವಿಶ್ವನಾಥ್ ಪರಾರಿಯಾಗಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here