ಬೆಂಗಳೂರು ಗ್ರಾಮಾಂತರ:- ಇನ್ನೋವಾ ಕಾರೊಂದು ಭೀಕರವಾಗಿ ಅಪಘಾತಕ್ಕೀಡಾಗಿರುವ ಘಟನೆ ದೊಡ್ಡಬಳ್ಳಾಪುರ ಗೌರಿಬಿದನೂರು ರಾಜ್ಯ ಹೆದ್ದಾರಿಯ ಮಾಕಳಿ ಬಳಿ ಜರುಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಳಪ್ಪ, ಪುರುಷೋತ್ತಮ್, ನಾರಾಯಣಪ್ಪ, ಡಿಎಂ ಈಶ್ವರಪ್ಪ ಮೃತ ದುರ್ದೈವಿಗಳು,
Advertisement
ಬೆಳಗ್ಗೆ ದೇವಸ್ಥಾನಕ್ಕೆಂದು ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ 08 ಜನರಲ್ಲಿ 4 ನಾಲ್ವರು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಅಪಘಾತದ ರಬಸಕ್ಕೆ ಹೆದ್ದಾರಿಯಲ್ಲಿ ಮೃತದೇಹಗಳು ಚೆಲ್ಲಾ ಪಿಲ್ಲಿಯಾಗಿದೆ.
ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.