ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯ ಸಂಬಂಧಕ್ಕೆ ಅವಿನಾಭಾವ ಸಂಬಂಧವಿದೆ. ಅಂತಹ ಗುರು-ಶಿಷ್ಯ ಜೋಡಿಗಳನ್ನು ನಾವು ಭಾರತೀಯ ಇತಿಹಾಸದುದ್ದಕ್ಕೂ ಕಾಣುತ್ತೇವೆ. ಈ ಪರಂಪರೆಯಲ್ಲಿ ಕಂಡು ಬರುವ ಬ್ರಹ್ಮಚೈತನ್ಯರು–ಬ್ರಹ್ಮಾನಂದರು ಅಪ್ರತಿಮ ಗುರು-ಶಿಷ್ಯರಾಗಿದ್ದರು ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಆಚರಿಸಲಾದ ಶ್ರೀ ಬ್ರಹ್ಮಾನಂದ ಮಹಾರಾಜರ ಪುಣ್ಯತಿಥಿ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಒಬ್ಬ ಗುರು ಒಳ್ಳೆಯ ಶಿಷ್ಯನನ್ನು ಹುಡುಕುತ್ತಿದ್ದರೆ, ಒಬ್ಬ ಶಿಷ್ಯ ತನ್ನ ಜೀವನದ ಉದ್ಧಾರಕ್ಕಾಗಿ ಒಬ್ಬ ಗುರುವನ್ನು ಹುಡುಕುತ್ತಿರುತ್ತಾನೆ. ಇಂತಹ ಸಮಯದಲ್ಲಿ ಒಬ್ಬರಿಗೊಬ್ಬರು ದೊರೆತರೆ ಇಬ್ಬರ ಜೀವನವೂ ಸಾರ್ಥಕವಾಗುತ್ತದೆ ಎಂಬುದನ್ನು ಬ್ರಹ್ಮಚೈತನ್ಯರು ಮತ್ತು ಬ್ರಹ್ಮಾನಂದರು ಬದುಕಿ ತೋರಿಸಿದರು ಎಂದು ಕುಲಕರ್ಣಿ ಹೇಳಿದರು.
ಶ್ರೀ ಬ್ರಹ್ಮಾನಂದರಿಗೆ ಬುಕೀಟನ್ನು ಹಾಕಿ ಆರತಿ ಮಾಡಲಾಯಿತು. ಈ ವೇಳೆ ದತ್ತ ಭಕ್ತ ಮಂಡಳಿ ಅಧ್ಯಕ್ಷ ಡಾ. ಎನ್.ಎಲ್. ಗ್ರಾಮಪುರೋಹಿತ, ಅರುಣ ಕುಲಕರ್ಣಿ (ಕುರಗಡ್ಡಿ), ಅಜಿತ ಕುಲಕರ್ಣಿ, ಮಂಜುನಾಥ ಗ್ರಾಮಪುರೋಹಿತ, ಆನಂದ ಕಾಳೆ, ಪ್ರಶಾಂತ ಗ್ರಾಮಪುರೋಹಿತ, ರಾಮಕೃಷ್ಣ ಸದರಜೋಷಿ, ಪವನ ಗ್ರಾಮಪುರೋಹಿತ, ಪರಿಮಳಾ ಗ್ರಾಮಪುರೋಹಿತ, ಸಂಧ್ಯಾ ಕುಲಕರ್ಣಿ, ಶೋಭಾ ಸೂರಭಟ್ಟನವರ, ಸನ್ಮತಿ ಸದರಜೋಷಿ, ಪಲ್ಲವಿ ಗ್ರಾಮಪುರೋಹಿತ, ಸೀಮಾ ಕೊಂಡಿ, ರಾಜಶ್ರೀ ಕುಲಕರ್ಣಿ, ಲಕ್ಷ್ಮಿ ಗ್ರಾಮಪುರೋಹಿತ, ಜಯಶ್ರೀ ಗ್ರಾಮಪುರೋಹಿತ, ಭಾರತಿಬಾಯಿ ಗ್ರಾಮಪುರೋಹಿತ, ಅನಿತಾ ಗ್ರಾಮಪುರೋಹಿತ, ಅರ್ಚನಾ ಕುಲಕರ್ಣಿ, ಪ್ರಿಯಾ ಕುಲಕರ್ಣಿ, ಶ್ವೇತಾ ಕಾಳೆ, ನಿಖಿತಾ ಗ್ರಾಮಪುರೋಹಿತ, ವಿದ್ಯಾ ಗ್ರಾಮಪುರೋಹಿತ, ಭಾಗ್ಯಾಬಾಯಿ ಕಾಳೆ, ಡಾ. ಸಪ್ನಾ ಕಾಳೆ, ರೇಣುಕಾ ಗ್ರಾಮಪುರೋಹಿತ, ಉಮಾ ಕೊಳ್ಳಿ, ಸುಮಾ ಉಡುಪಿ, ಗೀತಾಬಾಯಿ ಕೊಂಡಿ ಮತ್ತಿತರರಿದ್ದರು.
ನಮ್ಮ ದೇಶದಲ್ಲಿ ಆಗಿ ಹೋಗಿರುವ ಸಾಧು-ಸಂತರ ಜೀವನ ಚರಿತ್ರೆಗಳನ್ನು ಓದಿದರೆ ನಮಗೆ ಜೀವನ ದರ್ಶನವಾಗುತ್ತದೆ. ಅವರ ಜೀವನ ನಮಗೆ ಪಾಠವಾಗುತ್ತದೆ. ಈ ಪಾಠವು ನಮ್ಮ ಜೀವನದ ಹಾದಿಯನ್ನು ಸುಗಮಗೊಳಿಸುತ್ತದೆ. ಬ್ರಹ್ಮಚೈತನ್ಯರು ನೆನೆಸಿಕೊಂಡ ತಕ್ಷಣವೇ ಅಲ್ಲಿ ಬ್ರಹ್ಮಾನಂದರು ಹಾಜರಿರುತ್ತಿದ್ದರು. ಇಬ್ಬರೂ ಸೇರಿ ಈ ನಾಡಿನಲ್ಲಿ ಶ್ರೀರಾಮನಾಮವನ್ನು ಪ್ರಸರಣ ಮಾಡಿದರು. ಒಬ್ಬರ ಅಂತರಂಗವನ್ನು ಇನ್ನೊಬ್ಬರು ಚೆನ್ನಾಗಿ ಅರಿತಿದ್ದರು ಎಂದು ಅರುಣ ಕುಲಕರ್ಣಿ ತಿಳಿಸಿದರು.


