ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಮಾರುಕಟ್ಟೆ, ಗಣೇಶ ವಿಗ್ರಹ ಮಾರುವ ವಿವಿಧ ಮಳಿಗೆಗಳಿಗೆ ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಬುಧವಾರ ಭೇಟಿ ನೀಡಿ ಮಾರಾಟಕ್ಕಿಟ್ಟಿರುವ ಗಣೇಶ ಮೂರ್ತಿಗಳನ್ನು ಪರಿಶೀಲಿಸಿದರು.
Advertisement
ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ವಿಗ್ರಹ ತಯಾರಿಸಿ ಮಾರಾಟ ಮಾಡುವುದರಿಂದ ಪ್ರಕೃತಿಗೆ ಅತೀವ ನಷ್ಟವುಂಟಾಗಲಿದ್ದು, ವಿಸರ್ಜನೆ ಮಾಡಿದಾಗ ನೀರು ಕಲುಷಿತಗೊಳ್ಳುವುದಲ್ಲದೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಅಂತಹ ಮೂರ್ತಿ ತಯಾರಿಕೆ ಹಾಗೂ ಮಾರಾಟ ಕಂಡುಬಂದಲ್ಲಿ ಜಲ ಮಾಲಿನ್ಯ ತಡೆ ಮತ್ತು ಪ.ಪಂ ಕಾಯ್ದೆ ಅನ್ವಯ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಹೇಶ ನಿಡಶೇಶಿ ಎಚ್ಚರಿಸಿದರು.
ಈವೇಳೆ ಆರೋಗ್ಯ ನಿರೀಕ್ಷಕ ರಕ್ಷತ ಎಲ್ ಸೇರಿದಂತೆ ಪ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.