ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಉತ್ತರ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬದ ಸ್ಪರ್ಧಾ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ನಂ.1ರಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ್ ಮಾತನಾಡಿ, ಪಾಲಕರು ಮಕ್ಕಳೊಂದಿಗೆ ಬೆರೆತು ಕಲಿಕೆಯ ದೃಢೀಕರಣ ನೀಡುವ ಉತ್ತೇಜಕ ಕಾರ್ಯಕ್ರಮ ಇದಾಗಿದೆ. ಹಬ್ಬದ ವಾತಾವರಣದಲ್ಲಿ ವಿವಿಧ ಶಾಲೆಯ ಮಕ್ಕಳು, ಪಾಲಕರು, ಶಿಕ್ಷಕರು ಎಸ್ಡಿಎಂಸಿಯ ಸಹಭಾಗಿತ್ವದಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದು, ಆತ್ಮವಿಶ್ವಾಸ ಬೆಳೆಸುವುದು, ಶಾಲೆಯ ಸಾಧನೆಗಳ ಚಿತ್ರಣ ಅನಾವರಣಗೊಳಿಸುವ ಸದಾಶಯವೇ ಕಲಿಕಾ ಹಬ್ಬವಾಗಿದೆ. ಇದರಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಬೆಳಗುವುದರ ಜೊತೆಗೆ ಹೊಸ ಹೊಸ ಕಲಿಕೆಗೆ ಪ್ರೇರಣೆ ದೊರೆಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಶಿರಬಡಗಿ ವಹಿಸಿದ್ದರು. ವೇದಿಕೆಯಲ್ಲಿ ಇಸಿಓ ರಾಘವೇಂದ್ರ ಜೋಶಿ, ಆರ್.ಬಿ. ಪವಾರ, ಎಮ್.ಡಿ. ವಾರದ, ಬಸವರಾಜ ಕುಂಬಾರ, ಚಂದ್ರಕಾಂತ ನೇಕಾರ, ಬಿಆರ್ಪಿ ಬಿ.ಎಮ್. ಯರಗುಪ್ಪಿ, ಎಮ್.ಎ. ನದಾಫ್, ಬಿ.ಬಿ. ಯತ್ನಳ್ಳಿ, ಎ.ಎಮ್. ಅಕ್ಕಿ, ಎಸ್.ಡಿ. ಲಮಾಣಿ, ಸಿಆರ್ಪಿಗಳಾದ ಸಿ.ವಿ. ವಡಕಣ್ಣವರ, ಆರ್. ಮಹಾಂತೇಶ, ಎನ್.ಎ. ಮುಲ್ಲಾ, ಗಿರೀಶ್ ನೇಕಾರ, ತಿರಕಪ್ಪ ಪ್ರಜಾರ, ನವೀನ ಅಂಗಡಿ, ಜ್ಯೋತಿ ಗಾಯಕವಾಡ, ಶ್ರೀನಿವಾಸ ಮತ್ತೂರ, ಸತೀಶ ಬೊಮಲೆ, ಎಫ್.ಎಚ್. ನದಾಫ್, ಎಸ್.ಎಸ್. ಮಹಾಲಿಂಗಶೆಟ್ಟರ, ಈ.ಎಚ್. ಪೀಟರ್, ಅಕ್ಷತಾ ಕಾಟೇಗಾರ, ಕುದಿಯಾ ಆಶ್ಮೀನ್ ನದಾಫ್ ಮುಂತಾದವರಿದ್ದರು.
ಉತ್ತರ ಕ್ಲಸ್ಟರ್ ಸಿಆರ್ಪಿ ಉಮೇಶ ನೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ಡಿ.ಎನ್. ದೊಡ್ಡಮನಿ ಸ್ವಾಗತಿಸಿದರು. ಆರ್.ಬಿ. ಅಡರಕಟ್ಟಿ ಮತ್ತು ಎನ್.ಎಸ್. ಬಂಕಾಪುರ ನಿರೂಪಿಸಿದರು. ಎಸ್.ಎಮ್. ಬೊಮಲೆ ವಂದಿಸಿದರು.
ಕ.ರಾ.ಸ.ನೌ ಸಂಘದ ಅಧ್ಯಕ್ಷ ಗುರುರಾಜ ಹವಳದ ಮತ್ತು ಕ.ರಾ.ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ ಮಾತನಾಡಿ, ಕಲಿಕೆಯಲ್ಲಿ ಹಿಂದಿರುವ ಮಕ್ಕಳು ತಮ್ಮ ಮೂಲ ಸಾಮರ್ಥ್ಯವನ್ನು ಸಾಧಿಸಲು ಇದು ತುಂಬಾ ಸಹಕಾರಿಯಾಗಿದೆ. ಮಕ್ಕಳ ಪಾಲಕರು ಸರ್ಕಾರಿ ಶಾಲೆಗಳ ಬಗ್ಗೆ ಒಲವು ತೋರಿಸಿ, ಆದಷ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಪಾಲಕರು ಭಾಗವಹಿಸುವಂತೆ ಮಾಡಬೇಕು ಎಂದು ಹೇಳಿದರು.



