ಬೆಳಗಾವಿ: ಇನ್ಸ್ಟಾಗ್ರಾಮ್ ವಿಡಿಯೋಗಳಿಗಾಗಿ ಅಪಾಯಕಾರಿ ಸ್ಟಂಟ್ಗಳನ್ನು ಮಾಡುವುದರನ್ನ ಇತ್ತೀಚಿನ ದಿನಗಳಲ್ಲಿ ಸಾಕಷ್ಟನ್ನು ನೋಡಿರುತ್ತೇವೆ. ಇಂತಹ ಅನೇಕ ರೀಲ್‌ಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಟ್ರೆಂಡ್ ಆಗಿದೆ.
ರೈಲು ಬರುತ್ತಿರುವಾಗ ಹತ್ತಿರದ ಸ್ಥಳಗಳಲ್ಲಿ ನಿಂತು ಈ ರೀತಿ ರೀಲ್ ಮಾಡಿ ಪ್ರಾಣವನ್ನೇ ಕಳೆದುಕೊಂಡ ಹಲವು ನಿದರ್ಶನಗಳಿವೆ. ಇದೀಗ ಇನ್ಸ್ಟಾಗ್ರಾಮ್ ರೀಲ್ಸ್ ಗಾಗಿ ಸ್ಟಂಟ್ ಮಾಡಿದವರಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ.
ಹೌದು ಗನ್ ಹಿಡಿದು ಗ್ಯಾಂಗ್ ಸ್ಟಾರ್ ರೀಲ್ಸ್ ಹಾಗೂ ಅನಿಮಲ್ ಮೂವಿ ರೀ ಕ್ರಿಯೇಷನ್ ಮಾಡಿದ್ದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬೆಳಗಾವಿ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಕಲಿ ಗನ್ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಾ ರೀಲ್ಸ್ ಮಾಡಿದ್ದರು. ಇತ್ತೀಚಿಗೆ ಇಂಥ ರೀಲ್ಸ್ ಗಳಿಂದಲೇ ಗೋಕಾಕನಲ್ಲಿ ಯುವಕನ ಕೊಲೆ ಆಗಿತ್ತು. ಹೀಗಾಗಿ ರೀಲ್ಸ್ ಮಾಡಿದ್ದ ವಿದ್ಯಾರ್ಥಿಗಳನ್ನ ಮಾಳಮಾರುತಿ ಪೊಲೀಸರು ಠಾಣೆ ಕರೆಸಿ ಬುದ್ಧಿವಾದ ಹೇಳಿ ಕಳಿಹಿಸಿದ್ದಾರೆ.