ವಿಜಯಸಾಕ್ಷಿ ಸುದ್ದಿ, ಚಿಂಚೋಳಿ: ಕರ್ನಾಟಕ-ಮಹಾರಾಷ್ಟ್ರ ಗಡಿಭಾಗವಾದ ಆಳಂದ ಸಮೀಪದ ಖಜೂರಿಯಲ್ಲಿ ಈಗಾಗಲೇ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಬೃಹತ್ ಅನುಭವಮಂಟಪ ಮತ್ತು ಪ್ರಾಥಮಿಕ, ಪ್ರೌಢಶಾಲೆಯನ್ನು ಗದಗ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದಿಂದ ಸ್ಥಾಪಿಸಲಾಗಿದೆ.
ಈಗ ಕರ್ನಾಟಕ-ಆಂಧ್ರದ ಗಡಿಭಾಗವಾದ ಚಿಂಚೋಳಿ ತಾಲೂಕ ರುದ್ನೂರಿನಲ್ಲಿ ಪೂಜ್ಯ ಲಿಂಗೈಕ್ಯ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಪಂಚಲೋಹದ ಪುತ್ಥಳಿ ಹಾಗೂ ಶಿಲಾ ಮಂಟಪವನ್ನು ಅಲ್ಲಿಯ ಭಕ್ತರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ. ನಾಗಮಂಗಲದಿಂದ ಈ ಪುತ್ಥಳಿಯನ್ನು ದಿ.08ರಂದು ಎಡೆಯೂರಿನ ಶ್ರೀ ಸ್ವಾಮಿ ಕ್ಷೇತ್ರದಲ್ಲಿ ಸ್ವಾಗತಿಸಿ, ಪೂಜಿಸಿ, ರುದ್ನೂರಿಗೆ ಕಳುಹಿಸಲಾಯಿತು.
ಈ ಸ್ವಾಗತ ಕಾರ್ಯಕ್ರಮದಲ್ಲಿ ಎಡೆಯೂರಿನ ಹಿರಿಯರಾದ ಶ್ರೀ ಕೃಷ್ಣೇಗೌಡರು, ಅರ್ಚಕರು, ಕ್ಷೇತ್ರದ ದಾಸೋಹದ ಸಿಬ್ಬಂದಿಯವರು, ಎಡೆಯೂರಿನ ಹಿರಿಯರು ಹಾಗೂ ರುದ್ನೂರ ಭಕ್ತರಾದ ಶ್ರೀ ಶಿವರಾಜಗೌಡರು ಪಾಟೀಲ, ಬೆಂಗಳೂರಿನ ಸಿ.ಪಿ.ಐ. ಪ್ರಕಾಶ ಪಾಟೀಲ, ಚಿಂಚೋಳಿಯ ಲಿಂಗಶೆಟ್ಟರು, ನಾಗೇಂದ್ರಪ್ಪ ಮುಂತಾದವರು ಭಾಗವಹಿಸಿದ್ದರು ಎಂದು ಎಡೆಯೂರು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರೊ. ಶಿವಾನಂದ ಪಟ್ಟಣಶೆಟ್ಟರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.