ಬೆಳಗಾವಿ: ರಾತ್ರೋರಾತ್ರಿ ಬೆಳಗಾವಿಯ ಶಾಹುನಗರದಲ್ಲಿ ಔರಂಗಜೇಬ್ ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ಬ್ಯಾನರ್ ಅಳವಡಿಕೆಗೆ ಸ್ಥಳೀಯ ಜನರ ಆಕ್ಷೇಪ ವ್ಯಕ್ತಪಡಿಸಿದ್ದು, ಬ್ಯಾನರ್ ತೆರವು ಮಾಡುವಂತೆ ಪೊಲೀಸರಿಗೆ ಸ್ಥಳೀಯರಿಂದ ಒತ್ತಾಯ ಮಾಡಲಾಗಿತ್ತು. ಮಹಾನಗರ ಪಾಲಿಕೆ ಗಮನಕ್ಕೆ ತಂದು ಕೂಡಲೇ ಬ್ಯಾನರ್ ತೆರವು ಮಾಡಿದ್ದಾರೆ.
ಬ್ಯಾನರ್ ತೆರವು ಮಾಡಿದ್ದರಿಂದ ಕೆಲವು ಮುಸ್ಲಿಂ ಯುವ ಪುಢಾರಿಗಳು ಹಾಗೂ ಕಿಡಿಗೇಡಿಗಳು ಕ್ರುದ್ಧರಾಗಿದ್ದು, ವಿವಾದಾತ್ಮಕ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಔರಂಗಜೇಬ್ ಬ್ಯಾನರ್ ತೆರವು ಮಾಡಿದ್ದನ್ನುಆಕ್ಷೇಪಿಸಿದ್ದಾರೆ. ನಗರದಲ್ಲಿ ಹಿಂದೂ ರಾಷ್ಟ್ರ ಅಂತ ಬರೆದ ಬ್ಯಾನರ್ ಹಾಕಿದ್ದಾರೆ.
ಬ್ರಿಟಿಷರ ಬೂಟು ನೆಕ್ಕಿದ್ದ ಸಾವರ್ಕರ್ ಬ್ಯಾನರ್ ಹಾಕಿದ್ದಾರೆ. ಅದನ್ನು ಯಾಕೆ ಪೊಲೀಸರು ತೆಗೆಸಿಲ್ಲ? ಔರಂಗಜೇಬ್ ಬ್ಯಾನರ್ ತೆರವು ಮಾಡಿದ್ದನ್ನು ನಾವು ಸಹಿಸುವುದಿಲ್ಲ ಎಂದು ಮುಸ್ಲಿಂ ಯುವಕರು ಪ್ರಚೋದಕ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಬಿಟ್ಟಿದ್ದಾರೆ.