ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, “ಮಹಿಳೆಯರ ಬದಲಿಗೆ ಅರ್ಧನಾರೇಶ್ವರರನ್ನೇ ಹುಡುಕಲಿ” ಎಂದು ಟೀಕಿಸಿದರು. ನಗರದಲ್ಲಿ ಮಾತನಾಡಿದ ಅವರು,
ಸೆಪ್ಟೆಂಬರ್‌ನಲ್ಲಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಸಂಭವಿಸುತ್ತದೆ ಎಂಬ ಬಿಜೆಪಿ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ಅಶೋಕ್ ಮತ್ತು ವಿಜಯೇಂದ್ರ ಮೊದಲು ತಮ್ಮ ಸ್ಥಾನ ಉಳಿಸಿಕೊಳ್ಳಲಿ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.
ಬಿಜೆಪಿಗೆ ಎರಡು ವರ್ಷವಾದರೂ ರಾಷ್ಟ್ರಾಧ್ಯಕ್ಷರ ಆಯ್ಕೆ ಮಾಡಲು ಆಗಿಲ್ಲ. ಈಗ ಮಹಿಳೆಯರನ್ನೇ ಹುಡುಕುತ್ತಿರುವಂತಾಗಿದೆ. ಮಹಿಳೆಯರ ಬದಲು ಅರ್ಧನಾರೇಶ್ವರರನ್ನು ನೇಮಿಸಿದರೆ ಅವರು ಸಂತೋಷಪಡುವ ಪರಿಸ್ಥಿತಿ ಬಂದಿದೆ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.
ಇದೇ ವೇಳೆ ಸಿಎಂ ಸೀಟಿನ ಬಗ್ಗೆ ಮಾಧ್ಯಮಗಳಲ್ಲಿ ಮೂಡಿರುವ ತರ್ಕಗಳನ್ನು ತಿರಸ್ಕರಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಗೊಂದಲವಿಲ್ಲ. ಸಿಎಂ ಮತ್ತು ಡಿಸಿಎಂ ನಡುವೆ ವೈಷಮ್ಯವಿಲ್ಲ. ಗೊಂದಲ ಆಗ್ತಿರೋದು ಟಿವಿಗಳಲ್ಲೂ, ಮಾಧ್ಯಮಗಳಲ್ಲೂ ಮಾತ್ರ ಎಂದರು.