ವಿದ್ಯಾರ್ಥಿಗಳಲ್ಲಿ ಸದ್ಗುಣಗಳ ಅರಿವು ಮೂಡಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸ್ತುತ ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಹುಟ್ಟಿದ ಊರು, ಹೆತ್ತವರ ಮಹತ್ವ, ಕಲಿತ ಶಾಲೆ, ಕಲಿಸಿದ ಗುರುಗಳು, ಉಪಕಾರ ಮಾಡಿದವರನ್ನು ಸ್ಮರಿಸುವಂತಹ ಐದು ಗುಣಗಳ ಮಹತ್ವದ ಅರಿವನ್ನು ಮೂಡಿಸಿದರೆ ಖಂಡಿತವಾಗಿಯೂ ಆ ವಿದ್ಯಾರ್ಥಿ ಒಬ್ಬ ಉತ್ತಮ ನಾಗರಿಕನಾಗುತ್ತಾನೆ. ಈ ಜಗತ್ತಿನಲ್ಲಿ ತಂದೆ-ತಾಯಿ, ಕಲಿಸಿದ ಗುರುವಿಗಿಂತ ದೊಡ್ಡವರಾರೂ ಇಲ್ಲವೆಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

Advertisement

ಅವರು ಸರಕಾರಿ ಪ್ರೌಢಶಾಲೆಯ ಸಿದ್ಧಲಿಂಗ ನಗರದ 2005-06ನೇ ಸಾಲಿನ ವಿದ್ಯಾರ್ಥಿಗಳಿಂದ ಅಕ್ಷರದ ಅರಿವು ನೀಡಿದ ಗುರುವೃಂದಕ್ಕೆ ಏರ್ಪಡಿಸಿದ ಗುರವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುಬಳಗವನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಇತ್ತೀಚೆಗೆ ಗುರು ಮತ್ತು ಶಿಷ್ಯರ ಸಂಬಂಧ ಅಷ್ಟಕ್ಕಷ್ಟೇ ಅನ್ನುವಂತಹ ವಾತಾವರಣದಲ್ಲಿ ಈ ಶಾಲೆಯಲ್ಲಿ 20 ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿಗಳು ಕಲಿತ ಶಾಲೆಯ ಮೇಲಿನ ಹೆಮ್ಮೆಯಿಂದ ಕಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿದ್ದು ಅತ್ಯಂತ ಆತ್ಮೀಯ ಕಾರ್ಯಕ್ರಮ, ಇದು ಅತ್ಯಂತ ಅಭಿಮಾನದ ಹಾಗೂ ಹೆಮ್ಮೆಯ ಕಾರ್ಯಕ್ರಮ ಎಂದು ಹೇಳಲು ನನಗೆ ಖುಷಿ ಎನಿಸುತ್ತದೆ. ಈ ಶಾಲೆಯನ್ನು ದತ್ತುಪಡೆದು ಅಭಿವೃದ್ಧಿಪಡಿಸಿದ್ದು ಸಾರ್ಥಕವಾಗಿದೆ. ಇದರ ಸದುಪಯೋಗವನ್ನು ಈ ಭಾಗದ ಎಲ್ಲ ವಿದ್ಯಾರ್ಥಿಗಳು ಪಾಲಕರು ಮಾಡಿಕೊಳ್ಳಬೇಕು. ಈ ಕಾರ್ಯಕ್ರಮ ಇತರೆ ವಿದ್ಯಾಥಿಗಳಿಗೆ ಮಾದರಿ. ಗುರುವಂದನಾ ಕಾರ್ಯಕ್ರಮ ಏರ್ಪಡಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇದೇ ಸಂದರ್ಭದಲ್ಲಿ ದತ್ತು ಉಸ್ತುವಾರಿ ಡಾ. ಬಸವರಾಜ ಧಾರವಾಡ, ಡಿ.ಡಿ.ಪಿ.ಐ. ಆರ್.ಎಸ್. ಬುರಡಿ, ಶಹರ ಬಿ.ಇ.ಓ. ಆರ್.ವ್ಹಿ. ಶೆಟ್ಟೆಪ್ಪನವರ, ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ ಮುಂತಾದವರು ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಿಂದ ಗುರುವೃಂದದವರಾದ ಎಸ್.ಆರ್. ಹೂಗಾರ, ಎಂ. ವೀರಪ್ಪ, ಎ.ಎಮ್. ಕುಂಟೋಜಿ, ಎಸ್.ಎಸ್. ಕಪ್ಪರದ, ಎಂ.ಪಿ. ಚಿಂಚೇವಾಡಿ, ವ್ಹಿ.ಎಮ್.ಬೂದಿಹಾಳ, ಜೆ.ಬಿ. ಅಣ್ಣಿಗೇರಿ, ವ್ಹಿ.ಬಿ. ತಾಳಿಕೋಟಿ, ಎಸ್.ಆರ್. ಹನಮಗೌಡ್ರ, ಎಸ್.ಆರ್. ಯಲಿಗಾರ, ಗಾಯತ್ರಿ ವಸ್ತçದ, ಎಸ್. ಸುನಿತಾ, ಎಮ್.ಪಿ. ಸಾಂಬ್ರಾಣಿ, ಸಂಗೀತಾ ಪಾಟೀಲ, ಬಸಮ್ಮ ಹೂಗಾರ, ಎಂ.ಐ. ಶಿವನಗೌಡ್ರು, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ. ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಶಾರದಾ ಬಾಣದ, ಸಂಜೀವಿನಿ ಕೂಲಗುಡಿ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್ ಇವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.

ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳ ಬಗ್ಗೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುಭವವನ್ನು ಹಂಚಿಕೊAಡು ಅಂದಿನ ಶಾಲೆಯ ಸ್ಥಿತಿಗತಿ, ಇಂದು ಶಾಲೆ ಬೆಳವಣಿಗೆ ಆದ ಬಗ್ಗೆ ಖುಷಿಪಟ್ಟು, ತಿದ್ದಿ ತೀಡಿ ಕಲಿಸಿದ ಪ್ರತಿಯೊಬ್ಬ ಶಿಕ್ಷಕರನ್ನು ನೆನೆದು ಕೃತಜ್ಞತೆಯನ್ನು ಸಲ್ಲಿಸಿದರು.


Spread the love

LEAVE A REPLY

Please enter your comment!
Please enter your name here