ಹಿಂದೂ ದೇವತೆಗಳಿಗೆ ಅಪಮಾನ: ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ!

0
Spread the love

ಮಂಗಳೂರು:- ಸೋಶಿಯಲ್ ಮೀಡಿಯಾದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಲು ಯತ್ನಿಸುತ್ತಿರುವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.

Advertisement

ಹಿಂದೂ ಜನಜಾಗೃತಿ ಸಮಿತಿಯಿಂದ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್​ಐಆರ್​ ದಾಖಲಿಸಲಾಗಿದೆ.

“Fact Vid” ಎಂಬ ಹೆಸರಿನ ಫೇಸ್‌ಬುಕ್​ ಪೇಜ್​ನಲ್ಲಿ ಎಐ ಆಧಾರಿತ ಹಿಂದೂ ದೇವರ ಅಶ್ಲೀಲ ಚಿತ್ರಗಳನ್ನು ರಚಿಸಿ ಪೋಸ್ಟ್ ಮಾಡಲಾಗಿದೆ.​ ಶಿವ, ಕೃಷ್ಣ, ರಾಮ, ಗಣೇಶ ದೇವರು ಸ್ತ್ರೀಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವಂತೆ ಚಿತ್ರಿಸಲಾಗಿದೆ.

ಓಡಿಸುತ್ತಿರುವಂತೆ, ಕುಸ್ತಿ ಆಡುತ್ತಿರುವಂತೆ ವಿವಿಧ ರೀತಿಯಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವಂತೆ ಕಮೆಂಟ್ ಹಾಕಲಾಗುತ್ತಿದೆ. ಆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಆರೋಪಿಸಲಾಗಿದೆ. ಹಾಗಾಗಿ ಪೇಜ್ ಅಡ್ಮಿನ್‌ ಹಾಗೂ ಅವಹೇಳನಕಾರಿ ಕಮೆಂಟ್ ಹಾಕಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.


Spread the love

LEAVE A REPLY

Please enter your comment!
Please enter your name here