ಬಾಗಲಕೋಟೆ:- ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗಲು ಬಂದ ಜೋಡಿ ಮೇಲೆ ಯುವತಿ ಕಡೆಯವರು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಜರುಗಿದೆ. ಪ್ರೇಮಿಗಳಾದ ಗಾಣಿಗ ಸಮುದಾಯದ ಲಕ್ಷ್ಮೀ, ಮರಾಠಾ ಸಮುದಾಯದ ಅಪ್ಪಾಜಿ ಅಂತರ್ಜಾತಿ ವಿವಾಹಕ್ಕೆ ಬೆಳಿಗ್ಗೆ ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಜಮಖಂಡಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು.
ವಿಷಯ ತಿಳಿದು ಕಚೇರಿಗೆ ಧಾವಿಸಿದ ಯುವತಿಯ ಮನೆಕಡೆಯ ಪೋಷಕರು ಯುವತಿಗೆ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ. ಮೂರ್ಛೆ ಹೋಗಿ ಬಿದ್ದರೂ ಬಿಡದ ಹುಡುಗಿಯ ಮನೆಯವರು ಯುವತಿಗೆ ನೀರು ಕುಡಿಸಿ, ಮನೆಗೆ ಎಳೆದುಕೊಂಡು ಹೋಗಿದ್ದಾರೆ. ಈ ನಡುವೆ ರಿಕ್ಷಾದಲ್ಲಿದ್ದ ಯುವತಿ ಬಾಯಿಯಿಂದ ರಕ್ತ ಸುರಿಯುತ್ತಿದ್ದರೂ ಪ್ರಿಯಕರನತ್ತ ಕೈ ಸನ್ನೆ ಮಾಡುತ್ತಿದ್ದಳು. ಹಲ್ಲೆಗೆ ಒಳಗಾಗಿರುವ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಮಖಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.