ಮಾ.30ರಂದು ಸರ್ವಧರ್ಮ ಸಾಮೂಹಿಕ ವಿವಾಹ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಶ್ರೀ ಈಶ್ವರ ಬಸವಣ್ಣ ದೇವರ 15ನೇ ವರ್ಷದ ಜಾತ್ರಾ ಮಹೋತ್ಸವ, ಶಿವಶರಣೆ ಗುಡ್ಡಾಪುರದ ಶ್ರೀ ದಾನಮ್ಮದೇವಿ ಪುರಾಣ ಪ್ರಾರಂಭೋತ್ಸವದ ಅಂಗವಾಗಿ ಮಾರ್ಚ್ 29ರಂದು ಸಂಜೆ 4 ಗಂಟೆಗೆ ಕುಂಭಮೇಳ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 30ರಂದು ಬೆಳಿಗ್ಗೆ 11.30 ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ, ಸಂಜೆ 5.30 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ.

Advertisement

ಮಾರ್ಚ್ 30ರಂದು ಬೆಳಿಗ್ಗೆ 11.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗುವದು. ಈ ಕಾರ್ಯಕ್ರಮದ ಪಾವನ ಸಾನ್ನಿಧ್ಯವನ್ನು ಬೆಂಗಳೂರು ಜಿಲ್ಲೆಯ ಸುಕ್ಷೇತ್ರದ ಶಿವಗಂಗಾದ ಪೂಜ್ಯಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಮಣಕವಾಡ ಶ್ರೀಗುರು ಅನ್ನದಾನೀಶ್ವರ ದೇವಮಂದಿರ ಮಹಾಮಠದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಹರ್ಲಾಪೂರ ಶ್ರೀಕೊಟ್ಟೂರೇಶ್ವರ ಶ್ರೀಮಠದ ಪೂಜ್ಯಶ್ರೀ ಅಭಿನವ ಕೊಟ್ಟೂರೇಶ್ವರ ಶ್ರೀಗಳು, ಅಡ್ನೂರ-ರಾಜೂರ-ಗದಗ ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಹುಣಸಿಹಾಳ-ಸಂಗನಾಳ-ನಾಗರಾಳ ಬಸವಧರ್ಮ ಮಠದ ಪೂಜ್ಯಶ್ರೀ ಶಾಂತವೀರ ಮಹಾಸ್ವಾಮಿಗಳು, ಬಳಗಾನೂರ ಶ್ರೀ ಚನ್ನವೀರ ಶರಣರ ಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು, ಓಂಕಾರಗಿರಿ ಓಂಕಾರೇಶ್ವರ ಹಿರೇಮಠದ ಪೂಜ್ಯಶ್ರೀ ಫಕ್ಕಿರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ದನಕೊಳ್ಳ ದಾಸೋಹಮಠದ ಪೂಜ್ಯಶ್ರೀ ಡಾ. ಶಿವಕುಮಾರ ಸ್ವಾಮಿಗಳು ಸಮ್ಮುಖ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂಅಹ್ಮದ್, ಮಾಜಿ ಶಾಸಕ ಡಿ.ಆರ್. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಧಾರವಾಡದ ಕೆಸಿಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಬೆಳದಡಿ ಗ್ರಾಂ.ಪಂ ಮಾಜಿ ಅಧ್ಯಕ್ಷ ಶಂಭುಲಿಂಗಯ್ಯ ಕಲ್ಮಠ, ಕಳಸಾಪೂರ ಗ್ರಾ.ಪಂ ಅಧ್ಯಕ್ಷೆ ಅನಸೂಯಾ ಪಾಟೀಲ, ಉಪಾಧ್ಯಕ್ಷೆ ರಾಜೇಶ್ವರಿ ಘೋಡಕೆ ಆಗಮಿಸುವರು.

ಅತಿಥಿಗಳಾಗಿ ಶರದರಾವ್ ಹುಯಿಲಗೋಳ, ಪ್ರಭಯ್ಯ ದಂಡಾವತಿಮಠ, ಚಂದ್ರು ಬಾಳಿಹಳ್ಳಿಮಠ, ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಬೆಳದಡಿ, ಬಂಜಾರಾ ಸಮಾಜದ ರಾಜ್ಯಾಧ್ಯಕ್ಷ ಆನಂದ ಅಂಗಡಿ, ಡಿವೈಎಸ್‌ಪಿ ಮಡಿವಾಳಪ್ಪ ಸಂಕದ, ಹುಬ್ಬಳ್ಳಿಯ ಸಂಜೀವಕುಮಾರ ಶಿಂಪರ, ಗದಗ ತಾ.ಪಂ ಮಾಜಿ ಅಧ್ಯಕ್ಷ ಪಿ.ಸಿ. ಹಿರೇಮಠ, ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ಯೋಗೇಶ ಎ., ಕಂದಾಯ ಇಲಾಖೆಯ ಗುರು ಹಡಗಲಿಮಠ, ಪತ್ರಕರ್ತರಾದ ಆನಂದಯ್ಯ ವಿರಕ್ತಮಠ, ಬೆಂಗಳೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ, ಗದಗ ತಾ.ಪಂ ಮಾಜಿ ಅಧ್ಯಕ್ಷ ಬಿ.ಆರ್. ದೇವರಡ್ಡಿ, ಉದ್ಯಮಿ ಶಿವಯೋಗಿ ತೆಗ್ಗಿನಮಠ, ಹಾವೇರಿ ತಹಸೀಲ್ದಾರ ಕುಮಾರ ಅಣ್ಣಿಗೇರಿ, ಯುವ ಮುಖಂಡ ವಸಂತ ಪಡಗದ, ಮಂಜುನಾಥ ಮಾಗಡಿ, ಸುರೇಶ ಚವ್ಹಾಣ, ದಿ. ಸರಾಫ್ ಅಸೋಸಿಯೇಶನ್ ಅಧ್ಯಕ್ಷ ಸಿದ್ದಲಿಂಗೇಶ ಮೂರಶಿಳ್ಳಿನ, ಗದಗ ತಾ.ಪಂ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ಚಿಂಚಲಿ, ಬೇವಿನಹಳ್ಳಿಯ ಬಸನಗೌಡ ಪಾಟೀಲ, ಗದಗ ಜಾಮೀಯಾ ಮಸೀದಿ ಅಧ್ಯಕ್ಷ ಸಾಧಿಕಸಾಬ ನರಗುಂದ ಆಗಮಿಸುವರು.

ಮಾರ್ಚ್ 30ರಂದು ಸಂಜೆ 5.30 ಗಂಟೆಗೆ ಮಹಾರಥೋತ್ಸವ, ರಾತ್ರಿ 9 ಗಂಟೆಗೆ ಗದುಗಿನ ಸ್ಪೂರ್ತಿ ಮೆಲೋಡಿಸ್ ಅರ್ಕೆಸ್ಟ್ರಾ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗುವದು. ಮಾ.31 ರಂದು ಸಂಜೆ 5.30 ಗಂಟೆಗೆ ಲಘು ರಥೋತ್ಸವ, ರಾತ್ರಿ 9 ಗಂಟೆಗೆ ಕೊಪ್ಪಳದ ಅಭಿನವ ಮ್ಯೂಸಿಕಲ್ ಇವೆಂಟ್ಸ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರಗುವದು ಎಂದು ಈಶ್ವರ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಕಮಿಟಿಯು ಪ್ರಕಟಣೆಯಲ್ಲಿ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here