ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿ

0
International Democracy Day
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯ ಬಾಲೆಹೊಸೂರ ಗ್ರಾಮದಿಂದ ಸೂರಣಗಿ ಮಾರ್ಗವಾಗಿ ನೆಲೊಗಲ್ ಗ್ರಾಮದವರೆಗೆ ನಡೆದ ಮಾನವ ಸರಪಳಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು, ಜನಪ್ರತಿನಿಧಿಗಳು, ಎಲ್ಲ ಇಲಾಖೆಗಳ ನೌಕರರು, ಸಾರ್ವಜನಿಕರು ಸೇರಿ 20 ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಸಂದೇಶ, ಮೌಲ್ಯಗಳನ್ನು ಸಾರಿದರು.

Advertisement

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಮೌಲ್ಯಗಳು, ತತ್ವಗಳನ್ನು ಎತ್ತಿ ಹಿಡಿಯಲು ಈ ದಿನವನ್ನು ವಾರ್ಷಿಕವಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. 2007ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನಿರ್ಣಯವನ್ನು ಅಂಗೀಕರಿಸಿದ ನಂತರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸ್ಥಾಪಿಸಲಾಯಿತು. ಭಾರತದಲ್ಲಿ, ಸಂಸತ್ತು ಅಥವಾ ನ್ಯಾಯಾಂಗವಲ್ಲದ ಸಂವಿಧಾನವೇ ಸರ್ವೋಚ್ಚವಾಗಿದೆ. ಭಾರತವು ಲಿಖಿತ ಸಂವಿಧಾನವನ್ನು ಹೊಂದಿದೆ.

International Democracy Day

ಇದರಲ್ಲಿ ನಾಗರಿಕರ ಹಕ್ಕುಗಳು, ಸ್ವಾತಂತ್ರ‍್ಯ ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಇದು ಇತರ ದೇಶಗಳಿಗಿಂತ ಭಿನ್ನವಾಗಿ ಎಂದು ಹೇಳಿದ ಅವರು, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಮ್ಮ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕೆ ಶ್ರಮಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುವದಾಗಿ ಹೇಳಿದರು.

ನಿಗದಿತ ವೇಳಾಪಟ್ಟಿಯಂತೆ ಎಲ್ಲ ಕಾರ್ಯಕ್ರಮಗಳು ಸುಗಮವಾಗಿ ನಡೆದವು. ಸೇರಿದ್ದ ಸಾವಿರಾರು ಜನರು ನಾಡಗೀತೆ ಹಾಡಿ, ಸಂವಿದಾನ ಪೀಠಿಕೆ, ಪ್ರತಿಜ್ಞಾವಿಧಿ ಓದಿದರು.ಮಾನವ ಸರಪಳಿಯಲ್ಲಿಯೇ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ `ಜೈ ಹಿಂದ್, ಜೈ ಕರ್ನಾಟಕ’ ಘೋಷಣೆ ಕೂಗಿ ಸರಪಳಿಯನ್ನು ಕಳಚುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಈ ವೇಳೆ ಅರಣ್ಯ ಇಲಾಖೆಯ ಸಹಕಾರದೊಂದಿಗೆ ರಸ್ತೆ ಬದಿಗಳಲ್ಲಿ ನೂರಾರು ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ, ಇಓ ಕೃಷ್ಣಪ್ಪ ಧರ್ಮರ, ಸಿಪಿಐ ನಾಗರಾಜ ಮಾಡಳ್ಳಿ, ಮಾಜಿ ಶಾಸಕರುಗಳಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಬಾಲೇಹೊಸೂರು ಗ್ರಾ.ಪಂ ಅಧ್ಯಕ್ಷೆ ಚನ್ನವ್ವ ಮೈಲಾರಿ, ಉಪಾಧ್ಯಕ್ಷೆ ರೇಖಾ ನೆನಗನಹಳ್ಳಿ, ಆಹಾರ ಇಲಾಖೆ ನಿರ್ದೇಶಕರು, ಜಿಲ್ಲಾ ಯೋಜನಾ ನಿರ್ದೇಶಕರು, ತಾಲೂಕು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜು ಶಿಕ್ಷಕರು, ಉಪನ್ಯಾಸಕರು, ಸಾವಿರಾರು ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಜರಿದ್ದರು. ಆರಂಭದಲ್ಲಿ ಚಂದನ ಸ್ಕೂಲ್‌ನ ಮ್ಯೂಜಿಕ್ ಬ್ಯಾಂಡ್ ಕಂಪನಿಯಿAದ ನಾಡಗೀತೆ ನುಡಿಸಿ ಗಮನ ಸೆಳೆದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಯಶಸ್ಸು ಇಡಿಯ ತಾಲೂಕಿನ ಸಮಸ್ತ ಜನರಿಗೆ ಸೇರುತ್ತದೆ. ನಿರೀಕ್ಷೆಯನ್ನು ಮೀರಿ ಜನರು ಪಾಲ್ಗೊಂಡಿರುವದು, ಜನಪ್ರತಿನಿಧಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಶಿಕ್ಷಕರು ಸಾರ್ವಜನಿಕರ ಬೆಂಬಲಕ್ಕೆ ಆಡಳಿತದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.
– ವಾಸುದೇವ ಸ್ವಾಮಿ.
ತಹಸೀಲ್ದಾರರು, ಲಕ್ಷ್ಮೇಶ್ವರ.


Spread the love

LEAVE A REPLY

Please enter your comment!
Please enter your name here