ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1ರಿಂದ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1ರಿಂದ ಮಾರ್ಚ್ 8ರವರೆಗೆ ನಡೆಯಲಿದೆ. ಈ ವರ್ಷ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಲ್ಲಿ ಚಲನಚಿತ್ರೋತ್ಸವ ನಡೆಯುತ್ತಿದೆ ಎಂದು ತಿಳಿಸಿದರು.
60 ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳು 13 ಚಿತ್ರಮಂದಿರದಲ್ಲಿ ಪ್ರದರ್ಶನ ಆಗಲಿವೆ. ಒಟ್ಟು 400 ಶೋಗಳು ಇರಲಿವೆ. ಬೆಂಗಳೂರು ನಾಗರಿಕರಿಗೆ ಬೇರೆ ಬೇರೆ ದೇಶ, ಭಾಷೆ ನೋಡೋ ಅವಕಾಶ ಸಿಗಲಿದೆ. ಬೆಂಗಳೂರು ನಾಗರೀಕರಿಗೆ ಸುವರ್ಣ ಅವಕಾಶ ಅಂತ ತಿಳಿಸಿದರು.
ಚಿತ್ರೋತ್ಸವಕ್ಕೆ ಯಾರು ಮುಖ್ಯ ಅತಿಥಿಗಳು ಆಗಬೇಕು ಅಂತ ಸಮಿತಿಯೇ ತೀರ್ಮಾನಿಸುತ್ತದೆ. ರಾಜ್ಯಪಾಲ ಗೆಹ್ಲೋಟ್ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗ್ತಾರೆ ಅಂತ ಸಿಎಂ ತಿಳಿಸಿದರು.