ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ವತಿಯಿಂದ ಮಾ.11ರಂದು ಬೆಳಿಗ್ಗೆ 11 ಗಂಟೆಗೆ ಕೆ.ಎಚ್. ಪಾಟೀಲ ಸಭಾಭವನದಲ್ಲಿ `ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಸುವರ್ಣ ಮದರಿಮಠ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.ಡಾ. ತೋಂಟದ ಸಿದ್ಧರಾಮ ಶ್ರೀಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೈಟೆಕ್ ಮ್ಯಾಗನೇಟಿಕ್ ಇಲೆಕ್ಟ್ರಾನಿಕ್ ಪ್ರೈ. ಲಿಂ. ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕಿ ಉಮಾ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಮುನವಳ್ಳಿ, ಡ್ರೀಮ್ಸ್ ಇವೆಂಟ್ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಶೀತಲ ಚಿಲುಮೈ ಆಗಮಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವ್ಯಾಪಾರ, ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಠ ಸಾಧನೆ ಮಾಡಿದ ಮೆಜಿಥಿಯಾ ಫೌಂಡೇಶನ್ ಹುಬ್ಬಳ್ಳಿಯ ರಮಿಲಾ ಮೆಜಿಥಿಯಾ, ಸುವಿಜಯ ಅಗ್ರಿವೆಂಚರ್ ಗದಗನ ಜಯಶ್ರೀ ಹುಬ್ಬಳ್ಳಿ, ಆಭಿಯಾನ ಟ್ರೇಡಿಂಗ್ ಕಂಪನಿಯ ಮಂಗಲಾ ಯಳಮಲಿ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಜಯಶ್ರೀ ಹುಬ್ಬಳ್ಳಿ, ವೀಣಾ ಪೋತ್ನಿಸ್, ಜ್ಯೋತಿ ದಾನಪ್ಪಗೌಡ್ರ, ಸುಜಾತಾ ಗುಡಿಮನಿ, ಭಾಗ್ಯಶ್ರೀ ಕುರುಡಗಿ, ಸುರೇಖಾ ಮಲ್ಲಾಡದ, ಸುಷ್ಮಾ ಜಾಲಿ ಮುಂತಾದವರಿದ್ದರು.