ವಿಜಯಸಾಕ್ಷಿ ಸುದ್ದಿ, ಮುಳಗುಂದ : ನಿತ್ಯ ಯೋಗದಿಂದ ಉತ್ತಮ ಆರೋಗ್ಯ, ಸದೃಢ ಮನಸ್ಸು ಹೊಂದಬಹುದು ಎಂದು ಶಿರಹಟ್ಟಿ ತಾಲೂಕಾ ಧರ್ಮಸ್ಥಳ ಯೋಜನಾಧಿಕಾರಿ ಪುನಿತ ಓಲೇಕಾರ ಹೇಳಿದರು.
ಅವರು ಪಟ್ಟಣ ಕೆ.ಎಸ್.ಎಸ್. ಮಾಹಾವಿದ್ಯಾಲಯದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಕ್ಕೆ ಯೋಗದ ಮಹತ್ವ ತಿಳಿಸಿಕೊಟ್ಟಿದ್ದು ಭಾರತ. ಇಂತಹ ದೇಶದಲ್ಲಿ ನಾವೆಲ್ಲರೂ ಜೀವಿಸುತ್ತಿರುವುದೇ ಪುಣ್ಯ. ಯೋಗಾಭ್ಯಾಸದರಿಂದ ಮನುಷ್ಯ ಚೈತನ್ಯಶೀಲನಾಗಿ ತಮ್ಮ ತಮ್ಮ ಕಾಯಕದಲ್ಲಿ ತೊಡಗಲು ಸಾಧ್ಯವಾಗುತ್ತದೆ ಎಂದರು.
ಸಾನ್ನಿಧ್ಯವನ್ನು ಗದಗ ಅಡವೀಂದ್ರಸ್ವಾಮಿ ಮಠದ ಮಹೇಶ್ವರ ಸ್ವಾಮಿಜಿ, ಅಧ್ಯಕ್ಷತೆಯನ್ನು ಕೆಎಸ್ಎಸ್ ಮಾಹಾವಿದ್ಯಾಲಯದ ಕಾರ್ಯದರ್ಶಿ ಸಂಕೇತ ದಂಡಿನ, ಮುಖ್ಯ ಅತಿಥಿಯಾಗಿ ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ವಿಜಯ ನೀಲಗುಂದ, ಅನೂಪ ಕೆಂಚನಗೌಡರ, ಮುಳಗುಂದ ಧರ್ಮಸ್ಥಳ ಸಂಘದ ಮೇಲ್ವಿಚಾರಕಿ ಶಾಂತಾ, ಗೀತಾ ಜಾಧಾವ, ಮಂಗಳಾ ನೀಲಗುಂದ, ಹರ್ಷಲತಾ ದೇಶಪಾಂಡೆ, ಅಕ್ಕಮ್ಮಾ ನೀಲಗುಂದ, ಶೋಭಾ ಪಾಟೀಲ್, ಕವಿತಾ ದೊಟಿಕಲ್ ಹಾಗೂ ಮುಳಗುಂದ ಕ್ಲಸ್ಟರ್ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.