HomeGadag Newsಯೋಗವು ಸಾಧನೆಯ ಸೋಪಾನ : ಡಾ. ಶಿವಪ್ಪ ಕುರಿ

ಯೋಗವು ಸಾಧನೆಯ ಸೋಪಾನ : ಡಾ. ಶಿವಪ್ಪ ಕುರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತದ ಸಂಸ್ಕೃತಿಯ ಹಲವು ವೈಶಿಷ್ಟ್ಯಗಳಲ್ಲಿ ಯೋಗವೂ ಒಂದಾಗಿದ್ದು, ಇದು ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟಕೊಂಡು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ಸಾಧಿಸಲು ಸಹಕಾರಿಯಾಗಿದೆ. ಹೀಗಾಗಿ, ಪ್ರಾಚೀನ ಆಚಾರ್ಯರು, ಮುನಿಗಳು, ದಾರ್ಶನಿಕರು ಯೋಗದಿಂದಲೇ ಸಕಲ ಜ್ಞಾನಗಳಲ್ಲಿ ಪಾಂಡಿತ್ಯ ಸಂಪಾದಿಸಿ ವಿಶ್ವವಂದಿತ ಯೋಗಿಗಳಾಗಿದ್ದಾರೆ ಎಂದು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.

ಅವರು ಕಾಲೇಜಿನ ಎನ್.ಎಸ್.ಎಸ್. ಘಟಕ ಮತ್ತು ಕ್ರೀಡಾ ವಿಭಾಗ ಜಂಟಿಯಾಗಿ ಐಕ್ಯುಎಸಿ ಅಡಿಯಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಭೌತಿಕವಾಗಿ ಸದೃಢವಾಗಲು ಹಾಗೂ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸಲು ಯೋಗವು ಮೊದಲ ಸೋಪಾನವಾಗಿದೆ. ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದರು.

ಎನ್.ಎಸ್.ಎಸ್. ಘಟಕದ ಸಂಯೋಜಕ ಮತ್ತು ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಭಾರತದಲ್ಲಿ ಯೋಗದ ಪ್ರಾಚೀನತೆ, ಇತಿಹಾಸ, ಬೆಳವಣಿಗೆ, ಪುರಾಣ-ಕೃತಿ-ಕಾವ್ಯಗಳಲ್ಲಿ ಯೋಗದ ಪ್ರಸ್ತಾಪಗಳು, ಯೋಗದ ಪ್ರಸ್ತುತತೆ ಕುರಿತು ವಿವರಿಸಿದರು.

ಕ್ರೀಡಾ ವಿಭಾಗದ ನಿರ್ದೇಶಕ ಡಾ. ಬಸವರಾಜ ಅಂಬಿಗೇರ ಯೋಗದ ವಿವಿಧ ಪ್ರಕಾರಗಳು, ಯೋಗದಿಂದಾಗುವ ಪರಿಣಾಮಗಳು, ಭಾರತದ ಯೋಗ ಪದ್ಧತಿ ವಿಶ್ವದಾದ್ಯಂತ ಪ್ರಸಾರದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!