ಬೆಂಗಳೂರು: ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಬಳಿ ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನನ್ನು ಬಂಧಿಸಲಾಗಿದೆ. ಉತ್ತರಕಾಂಡದ ನೈನಿತಾಲ್ ಮೂಲದ ಜಿತೇಂದ್ರ ಕುಮಾರ್ ಬಂಧಿತ ಆರೋಪಿಯಾಗಿದ್ದು,
2018 ರಲ್ಲಿ ರೈಲಿನ ಎಸಿ ಕೋಚ್ ನಲ್ಲಿ ಬಾಗಲಕೋಟೆಯಿಂದ ಅರಸೀಕೆರೆಗೆ ಪ್ರಯಾಣ ಮಾಡ್ತಿದ್ದ ಸ್ವಾಮೀಜಿ ಲೆದರ್ ಬ್ಯಾಗ್ ನಲ್ಲಿ ಚಿನ್ನದ ಆಭರಣ ನಗದು ಹಣ ಇಟ್ಟು ನಿದ್ದೆಗೆ ಜಾರಿದ್ದರು.
ತಡರಾತ್ರಿ 2.15 ಕ್ಕೆ ಎದ್ದು ನೋಡಿದ್ದಾಗ ಕಳ್ಳತನವಾಗಿತ್ತು.. ಈ ವೇಳೆ ಬ್ಯಾಗ್ ನಲ್ಲಿದ್ದ ಹಣ ಆಭರಣ ಮಾಯಾವಾಗಿತ್ತು. ಚಿನ್ನದ ಸರ 250 ಗ್ರಾಂ, ಗೌರಿಶಂಕರ ರುದ್ರಾಕ್ಷಿ ಪದಕ, ಎರಡು ಚಿನ್ನದ ಉಂಗುರಗಳು 50 ಗ್ರಾಂ, 1.62 ಲಕ್ಷ ನಗದು ಹಣ ಇಟ್ಟಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಅರಸೀಕೆರೆ ರೈಲ್ವೆ ಪೊಲೀಸರು ಏಳು ವರ್ಷಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.



